Ticker

6/recent/ticker-posts

Ad Code

ಸೀತಾಂಗೋಳಿಯಲ್ಲಿ ಬದಿಯಡ್ಕ ನಿವಾಸಿಯ ಕೊಲೆಗೈಯ್ಯಲು ಯತ್ನಿಸಿದ ಪ್ರಕರಣ; ಪಟ್ಲ ನಿವಾಸಿಯ ಸೆರೆ


 ಕುಂಬಳೆ: ಸೀತಾಂಗೋಳಿಯಲ್ಲಿ ಬದಿಯಡ್ಕ ನಿವಾಸಿ ಅನಿಲ್ ಕುಮಾರ್ ಯಾನೆ ಕುಟ್ಟನ್ ಎಂಬಿವರನ್ನು ಇರಿದು ಕೊಲೆಗೈಯ್ಯಲು ಯತ್ನಿಸಿದ ಪ್ರಕರಣದ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಪಟ್ಲ ಪನ್ನಿಯೂರ್ ನಿವಾಸಿ ರಾಮಚಂದ್ರನ್ (55) ಬಂಧಿತ ಆರೋಪಿ. ಕುಂಬಳೆ ಇನ್ಸ್ಪೆಕ್ಟರ್ ಟಿ.ಕೆ.ಮುಕುಂದನ್ ಹಾಗೂ ತಂಡ ಆರೋಪಿಯನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಅಕ್ಷಯ್,ಮಹೇಶ್,ರಜೀಶ್,ಅಜಿತ್,ಹರಿಪ್ರಸಾದ್ ಎಂಬಿವರನ್ನು ಈ ಹಿಂದೆಯೇ ಬಂಧಿಸಲಾಗಿತ್ತು.

     ಅಕ್ಟೋಬರ್ 5 ರಂದು ರಾತ್ರಿ ಬದಿಯಡ್ಕ ಪೇಟೆಯಲ್ಲಿ  ಮೀನು ವ್ಯಾಪಾರಿಯಾಗಿರುವ ಕುಟ್ಟನ್ ಯಾನೆ ಅನಿಲ್ ಕುಮಾರ್ ರನ್ನು ಸೀತಾಂಗೋಳಿ ಪೇಟೆಯಲ್ಲಿ ತಂಡವು ಇರಿದಿತ್ತು. ದುಷ್ಕರ್ಮಿಗಳು ಇರಿದ ಕತ್ತಿಯನ್ನು ಅನಂತರ ಮಂಗಳೂರು ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆ ನಡೆಸಿ ಹೊರತೆಗೆಯಲಾಗಿತ್ತು.

Post a Comment

0 Comments