Ticker

6/recent/ticker-posts

Ad Code

ಕೆಲಸದ ಮಧ್ಯೆ ಕುಸಿದು ಬಿದ್ದ ಯುವಕ ಆಸ್ಪತ್ರೆಗೆ ಸಾಗಿಸುವ ಮಧೈ ಮೃತ್ಯು


 ನೀರ್ಚಾಲು: ಕೆಲಸದ ಮಧ್ಯೆ ಕುಸಿದು ಬಿದ್ದ ಯುವಕ ಆಸ್ಪತ್ರೆಗೆ ಸಾಗಿಸುವ ಮಧೈ ಮೃತಪಟ್ಟ ಘಟನೆ ನಡೆದಿದೆ. ಸೀತಾಂಗೋಳಿ ಬಳಿಯ ಮುಖಾರಿಗದ್ದೆ ಕೋಡಿಮೂಲೆಯ ಹರ್ಷ ರಾಜ್(26) ಮೃತಪಟ್ಟವರು. ಇವರು ಸೀತಾಂಗೋಳಿಯ ಸೋಲಾರ್ ಸಂಸ್ಥೆಯಲ್ಲಿ ಕಾರ್ಮಿಕರಾಗಿದ್ದರು. ಕನ್ನೆಪ್ಪಾಡಿ ಬಳಿಯ ಮಾಡತ್ತಡ್ಕದ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದರು. ನಿನ್ನೆ (ಗುರುವಾರ) ನೀರ್ಚಾಲು ಸಮೀಪದ ರತ್ನಗಿರಿಯಲ್ಲಿ ವ್ಯಕ್ತಿಯೋರ್ವರ ಮನೆಯಲ್ಲಿ ಸೋಲಾರ್ ಪಾನಲ್ ಸಿದ್ದಪಡಿಸಲು ಆಗಮಿಸಿದ್ದರು. ಮದ್ಯಾಹ್ನ ಊಟ ಮಾಡಿ ವಿಶ್ರಾಂತಿಯಲ್ಲಿರುವ ವೇಳೆ ಹರ್ಷರಾಜ್ ಗೆ ತಲೆ ಸುತ್ತಲು ಆರಂಭವಾಯಿತು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೂ ಅನಂತರ ಮಂಗಳೂರು ಖಾಸಗಿ ಆಸ್ಪತ್ರೆಗೂ ಕೊಂಡೊಯ್ಯಲಾಯಿತು. ಈ ವೇಳೆ ಅವರು ಮೃತಪಟ್ಟಿದ್ದರು. ಮೃತರು ತಂದೆ ಕೇಶವ, ತಾಯಿ ಜಯಂತಿ, ಸಹೋದರಿ ಅರ್ಚನ ಎಂಬಿವರನ್ನು ಅಗಲಿದ್ದಾರೆ

Post a Comment

0 Comments