Ticker

6/recent/ticker-posts

Ad Code

ಆಸ್ತಿ ಸಂಬಂಧ ವಿವಾದ ಜಗಳಕ್ಕೆ ತಿರುಗಿ ಇರಿತ; ಓರ್ವ ಮೃತ್ಯು


 ಆಸ್ತಿ ಸಂಬಂಧ  ವಿವಾದವು ಜಗಳಕ್ಕೆ  ತಿರುಗಿ ಇರಿತದಿಂದ ಯುವಕ ಮೃತಪಟ್ಟ ಘಟನೆ ನಡೆದಿದೆ. ಕಣ್ಣೂರು ಕೇಳಗಂ ನಿವಾಸಿ ರಾಯ್(45) ಮೃತಪಟ್ಟವರಾಗಿದ್ದು ಇವರ ಪತ್ನಿಯ ತಮ್ಮ ಜೈಸನ್(42) ನನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಆದಿತ್ಯವಾರ) ರಾತ್ರಿ 8.30 ಕ್ಕೆ ಘಟನೆ ನಡೆದಿದೆ. ರಾಯ್ ಹಾಗೂ ಜೈಸನ್ ನೆರೆಹೊರೆಯವರಾಗಿದ್ದಾರೆ. ಇವರೊಳಗೆ ಆಸ್ತಿಯ ಗಡಿ ವಿಷಯದಲ್ಲಿ ಆಗಾಗ ಜಗಳ ಉಂಟಾಗುತ್ತಿತ್ತು. ನಿನ್ನೆ ರಾತ್ರಿ ನಡೆದ ಜಗಳ ಕೊಲೆಯಲ್ಲಿ ಕೊನೆಗೊಂಡಿತು ಎನ್ನಲಾಗಿದೆ . ಗಂಭೀರ ಗಾಯಗೊಂಡ ರಾಯ್ ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪೊಲೀಸರು ಕೇಸು ದಾಖಲಿಸಿದರು.

Post a Comment

0 Comments