Ticker

6/recent/ticker-posts

Ad Code

ಉಪ್ಪಳದಲ್ಲಿ ಮಂಗಳೂರಿನ ಟೋಪಿ ನೌಫಲ್ ಕೊಲೆ ಪ್ರಕರಣ; ಸ್ಕೂಟರು, ಒಂದು ಮೊಬೈಲು ಫೋನು ಪತ್ತೆ, ಪೋಸ್ಟ್ ಮಾರ್ಟಂ ನಡೆಸಿದ ಡಾಕ್ಟರ್ ಸ್ಥಳಕ್ಕೆ ಬೇಟಿ


 ಮಂಜೇಶ್ವರ: ಉಪ್ಪಳ ರೈಲು ಹಳಿಯಲ್ಲಿ ಮಂಗಳೂರಿನ ರೌಡಿಯ ಮೃತದೇಹ ಕಂಡು ಬಂದ ಪ್ರಕರಣದ ತನಿಖೆಯಲ್ಲಿ ಪ್ರಗತಿಯುಂಟಾಗಿಲ್ಲವೆಂದು ತಿಳಿದು ಬಂದಿದೆ. ಕೊಲೆಯಾದ ಮಂಗಳೂರು ನಿವಾಸಿ‌ ಟೋಪಿ ನೌಫಲ್ ಪ್ರಯಾಣಿಸಿದ ಸ್ಕೂಟರ್ ನಿನ್ನೆ (ಆದಿತ್ಯವಾರ) ಪತ್ತೆಯಾಗಿದೆ. ಮೃತದೇಹದ ಸ್ಥಳದಿಂದ ಒಂದೂವರೆ ಕಿ.ಮೀಟರ್ ದೂರದ ಹೊಳೆ ಬದಿಯಲ್ಲಿ ಸ್ಕೂಟರ್ ಪತ್ತೆಯಾಗಿದೆ. ನೌಫಲ್ ಎರಡು ಫೋನು ಬಳಸುತ್ತಿದ್ದು ಒಂದು ಫೋನು ಪತ್ತೆಯಾಗಿದೆ. ಇನ್ನೊಂದು ಫೋನ್ ನಾಪತ್ತೆಯಾಗಿದೆ. ಮೃತದೇಹದ ಪೋಸ್ಟ್ ಮಾರ್ಟಂ ನಡೆಸಿದ ಡಾ.ರೋಹಿತ್ ನಿನ್ನೆ ಮೃತದೇಹ ಕಂಡು ಬಂದ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಇವರ ವರದಿ ಲಭಿಸಿಲ್ಲ.

    ಶನಿವಾರ ಬೆಳಗ್ಗೆ ಉಪ್ಪಳ ರೈಲು ಹಳಿ ಬಳಿ ಅಪರಿಚಿತ ಮೃತದೇಹ ಪತ್ತೆಯಾಗಿತ್ತು. ಅನಂತರ ನಡೆದ ತನಿಖೆಯಲ್ಲಿ ಮೃತದೇಹ ಮಂಗಳೂರಿನ ಖುಖ್ಯಾತ ರೌಡಿ ಟೋಪಿ ನೌಫಲ್ ನದ್ದು ಎಂದು ತಿಳಿದುಬಂತು. ಈ ಹಿನ್ನೆಲೆಯಲ್ಲಿ ಇದೊಂದು ವ್ಯವಸ್ಥಿತ ಕೊಲೆ ಎಂದು ತಿಳಿದುಬಂತು. ನೌಫಲ್ ನ ಕುತ್ತಿಗೆಯಲ್ಲಿ ಆಳವಾದ ಗಾಯಗಳಿತ್ತು ಎಂದು ಪೊಲೀಸರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಹಲವರನ್ನು ವಿಚಾರಣೆಗೆ ಕರೆಸಲಾಗಿದ್ದು ಬಿಡುಗಡೆಗೊಳಿಸಲಾಗಿದೆ.

Post a Comment

0 Comments