Ticker

6/recent/ticker-posts

Ad Code

ಸ್ನಾನ ಮಾಡಿಸುತ್ತಿರುವ ವೇಳೆ ತಾಯಿಯ ಕೈಯಿಂದ ಜಾರಿ ಬಾವಿಗೆ ಬಿದ್ದ ಮೂರು ತಿಂಗಳ ಮಗು ಮೃತ್ಯು


 ಮೂರು ತಿಂಗಳ ಮಗುವಿನ‌ ಮೃತದೇಹ ಮನೆಯ ಬಳಿಯ ಬಾವಿಯಲ್ಲಿ ಪತ್ತೆಯಾಗಿದೆ. ತಳಿಪರಂಬ ಕುರುಮಾತೂರು ಪೋಕುಂಡಿ ನಿವಾಸಿ ಜಾಬಿರ್- ಮುಬಶಿರ ದಂಪತಿಯ ಪುತ್ರ ಅಲನ್ ಮೃತಪಟ್ಟ ‌ಮಗು. ಇಂದು(ಸೋಮವಾರ) ಬೆಳಗ್ಗೆ ಘಟನೆ ನಡೆದಿದೆ. ತಾಯಿಯ ಬೊಬ್ಬೆ ಕೇಳಿ ನೆರನೆಯವರು ಓಡಿ ಬಂದು ಮಗುವನ್ನು ಮೇಲಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಪ್ರಾಣ ಉಳಿಸಲಾಗಲಿಲ್ಲ. ಮೃತದೇಹವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಯಿತು. ಮಗುವನ್ನು ಸ್ನಾನ ಮಾಡಿಸುತ್ತಿದ್ದಾಗ ಜಾರಿ ಬಾವಿಗೆ ಬಿದ್ದಿದೆಯೆಂದು ತಾಯಿ ಮುಬಶಿರ ಹೇಳಿದ್ದಾರೆ. ಆದರೆ ಪೊಲೀಸರು ಇದನ್ನು ನಂಬಿಲ್ಲ.

Post a Comment

0 Comments