Ticker

6/recent/ticker-posts

Ad Code

ಗೃಹಪ್ರವೇಶಕ್ಕೆ ಬಂದ 11 ವರ್ಷದ ಬಾಲಕಿಗೆ ಕಿರುಕುಳ ನೀಡಲು ಯತ್ನ, ಮುಖ್ಯಶಿಕ್ಷಕನ ಬಂಧನ

ಕುಂಬಳೆ: ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ 11 ವರ್ಷದ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಕಣ್ಣೂರು ಬ್ಲಾತೂರು ನಿವಾಸಿ ಸುಧೀರ್(48) ಎಂಬಾತನನ್ನು ಫೋಕ್ಸೋ ಕಾಯ್ದೆಯಂತೆ ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯ ಬಾಡೂರುಪದವು ಅನುದಾನಿತ ಶಾಲೆಯ   ಮುಖ್ಯಶಿಕ್ಷಕರಾಗಿದ್ದಾನೆ.

   ಸೀತಾಂಗೋಳಿ ಬಳಿಯಲ್ಲಿ ಈ ಘಟನೆ ನಡೆದಿದೆ. ಪ್ರಸ್ತುತ ಬಾಲಕಿಗೆ 3 ನೇ ತರಗತಿಯ ವರೆಗೆ ಆರೋಪಿ ಸುಧೀರ್ ಕಲಿಸಿದ್ದನು. ಇದೇ ಪರಿಚಯದಿಂದ ಗೃಹಪ್ರವೇಶ ನಡೆಯುವ ಮನೆಯ ಬಳಿಯಿಂದ ಜತೆಗೆ ಕೊಂಡೊಯ್ದು ಕಿರುಕುಳ ನೀಡಲು ಯತ್ನಿಸಿದನೆನ್ನಲಾಗಿದೆ. ಬಾಲಕಿಯ ರಹಸ್ಯ ಹೇಳಿಕೆ ಪಡೆಯಲು ಪೊಲೀಸರು ನಿರ್ದರಿಸಿದ್ದಾರೆ.

Post a Comment

0 Comments