ಬದಿಯಡ್ಕ: ಚುನಾವಣಾ ಪ್ರಚಾರ ತೀವ್ರಗೊಳ್ಳುತ್ತಿರುವ ನಡುವೆ ಬದಿಯಡ್ಕ ಪಂಚಾಯತ್‌ನ 15ನೇ ವಾರ್ಡ್ ಚೇಡೇಕಲ್ ಮತ್ತು 17ನೇ ವಾರ್ಡ್ ಮಾನ್ಯ ವಾರ್ಡ್‌ಗಳ ಚುನಾವಣಾ ಸಮಿತಿ ಕಚೇರಿಯನ್ನು ಕಾರ್ಯಾರಂಭಿಸಲಾಯಿತು. ಶ್ರೀ ಕುಞಕಣ್ಣನ್ ಗುರುಸ್ವಾಮಿ ದೀಪ ಬೆಳಗಿಸಿ ಚಾಲನೆ ನೀಡಿದರು. ಬಿಜೆಪಿಯ ಕಾಸರಗೋಡು ಜಿಲ್ಲಾಧ್ಯಕ್ಷರಾದ ಅಶ್ವಿನಿ ಎಂ.ಎಲ್. ಸಭೆಯನ್ನು ಉದ್ಘಾಟಿಸಿದರು. ಮಹೇಶ್ ವಳಕುಂಜ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಮಧುಚಂದ್ರ ಮಾನ್ಯ, ಅಭ್ಯರ್ಥಿಗಳಾದ, ಪ್ರಶಾಂತ್ ಶೆಟ್ಟಿ, ಪುನೀತ್ ಮಾನ್ಯ, ಸರೋಜಿನಿ ಮೊದಲಾದವರು ಉಪಸ್ಥಿತರಿದ್ದರು.

0 Comments