ಮಗನ ಅನ್ನಪ್ರಾಶನ ದಿನದಂದು ತಂದೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ತಿರುವನಂತಪುರಂ ಜಿಲ್ಲೆಯ ವಿದುರ ಪೆರಿಯತ್ತುಪಾರ ನಿವಾಸಿ ಅಮಲ್ ಕೃಷ್ಣ(35) ಆತ್ಮಹತ್ಯೆಗೈದ ವ್ಯಕ್ತಿ. ಇಂದು (ಶುಕ್ರವಾರ) ಬೆಳಗ್ಗೆ ಘಟನೆ ನಡೆದಿದೆ.
ಮನೆಯ ಸಮೀಪದ ಗುರುಮಂದಿರದಲ್ಲಿ ಇಂದು ಬೆಳಗ್ಗೆ ಪುತ್ರ ನಿಗೆ ಅನ್ನಪ್ರಾಶನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಂತೆ ಬಂಧು ಮಿತ್ರಾದಿಗಳು ಗುರು ಮಂದಿರಕ್ಕೆ ಆಗಮಿಸಿದ್ದರು. ಅನ್ನಪ್ರಾಶನದ ವೇಳೆ ಮಗುವಿನ ತಂದೆ ಬರದೇ ಇದ್ದು ಹುಡುಕಾಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂತು. ಕೂಡಲೇ ಹಗ್ಗ ತುಂಡರಿಸಿ ಆಸ್ಪತ್ರೆಗೆ ತಲುಪಿದರೂ ಪ್ರಾಣ ಉಳಿಸಲಾಗಲಿಲ್ಲ. ಅಮಿತ ಸಾಲದಿಂದಾಗಿ ಆತ್ಮಹತ್ಯೆ ಮಾಡುತ್ತಿರುವುದಾಗಿ ಅಮಲ್ ಕೃಷ್ಣ ಬರೆದ ಪತ್ರ ಪತ್ತೆಯಾಗಿದೆ

0 Comments