ಮುಳ್ಳೇರಿಯ : ವಿದ್ಯುತ್ ತಂತಿ ಎಳೆಯುವ ಕೆಲಸದ ನಡುವೆ ಇಲೆಕ್ಟ್ರಿಕ್ ಪೋಸ್ಟ್ ಕುಸಿದು ಬಿದ್ದು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದ ನೌಕರ ಮೃತಪಟ್ಟ ಘಟನೆ ನಡೆದಿದೆ.
ಕುಂಟಾರು ಹುಣ್ಸಡ್ಕ ನಿವಾಸಿ ಸಂಜೀವ ರಾವ್ ಅವರ ಪುತ್ರ ಎಚ್. ಯತೀಶ್ ( 46) ಮೃತ ವ್ಯಕ್ತಿಯಾಗಿದ್ದಾರೆ.
ಗುರುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು ಮುಳ್ಳೇರಿಯ ಸಮೀಪದ ಕರ್ಮಂತೋಡಿ ಎಂಬಲ್ಲಿ ವಿದ್ಯುತ್ ತಂತಿ ಎಳೆದು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದಾಗ ಕಂಬ ಕುಸಿದು ಇವರ ಮೇಲೆ ಬಿದ್ದಿದೆ.ತಕ್ಷಣ ಜತೆಗಿದ್ದ ಇತರ ಕಾರ್ಮಿಕರು ಕಾಸರಗೋಡು ಜನರಲ್ ಆಸ್ಪತ್ರೆಗೆ ಸೇರಿಸಿದರೂ ಪ್ರಾಣಾಪಾಯದಿಂದ ರಕ್ಷಿಸಲಿಕ್ಕಾಗಲಿಲ್ಲ.ಇದೀಗ ಈ ಪರಿಸರದಲ್ಲಿ ಶೋಕ ಸಾಗರ ಸೃಷ್ಠಿಯಾಗಿದೆ.

0 Comments