Ticker

6/recent/ticker-posts

Ad Code

ಶೇಣಿ ನಿವಾಸಿಯಾದ ಯುವಕ ಮಸ್ಕತ್ ನಲ್ಲಿ ಮೃತ್ಯು


 ಯುಎಇ : ವಿದೇಶ ಉದ್ಯೋಗದಲ್ಲಿದ್ದ ಮೂಲತಃ ಶೇಣಿ ನಿವಾಸಿ ಯುವಕನೋರ್ವ ಈಜಲು ತೆರಳಿದ ವೇಳೆ ಸಾವನ್ನಪ್ಪಿದ ಘಟನೆ ಮಸ್ಕತ್ ನಿಂದ ವರದಿಯಾಗಿದೆ. 

ಇಲ್ಲಿನ ಎಣ್ಮಕಜೆ ಗ್ರಾಮ ಪಂಚಾಯತಿನ ಶೇಣಿ ಸಮೀಪದ ಕಂಗಿನ ಮೂಲೆ ಶಾಹುಲ್ ಹಮೀದ್ ಎಂಬವರ ಪುತ್ರ ಅಬ್ದುಲ್ ಅಸೀಖ್ (22) ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ. ಕಳೆದ ಆರು ತಿಂಗಳ ಹಿಂದೆಯಷ್ಟೆ ಉದ್ಯೋಗಕ್ಕಾಗಿ ಮಸ್ಕತ್ ಗೆ ತೆರಳಿದ್ದು ವಾರದ ರಜೆಯಾದ ಕಾರಣ ಗೆಳೆಯರೊಂದಿಗೆ ಈಜಲು  ತೆರಳಿರುವುದಾಗಿ ಮಾಹಿತಿ ಇದೆ. ಮೃತ ಯುವಕನ ತಾಯಿ ಎರಡು ವರ್ಷಗಳ ಹಿಂದೆ ಮನೆ ಸಮೀಪ ನಡೆದ ವಾಹನ‌ ಅಪಘಾತವೊಂದರಲ್ಲಿ ತೀರಿಕೊಂಡಿದ್ದರು. ಅನೀಕಾ,ಅಸೀಕಾ ಸಹೋದರಿಯರರಾಗಿದ್ದಾರೆ. ರವಿವಾರ ಮೃತದೇಹ ಊರಿಗೆ ತರುವ ಕಾರ್ಯ ನಡೆಯುತ್ತಿದೆ ಎಂದು ಮೃತನ‌ ಸಂಬಂಧಿಕರು ತಿಳಿಸಿದ್ದಾರೆ.

Post a Comment

0 Comments