Ticker

6/recent/ticker-posts

Ad Code

ಆರು ನೂರು ಅಡಿ ಆಳದ ಕಂದಕಕ್ಕೆ ಕಾರು ಮಗುಚಿ 6 ಮಂದಿ ಮೃತ್ಯು

 ಕಾರೊಂದು ಕಂದಕಕ್ಕೆ ಉರುಳಿ 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಭಾನುವಾರ ಮಹಾರಾಷ್ಟ್ರದ ನಾಸಿಕ್‌ನ ಕಲ್ವಾನ್ ತಾಲ್ಲೂಕಿನ ಸಪ್ತಶ್ರಿಂಗ್ ಗರ್ ಘಾಟ್‌ನಲ್ಲಿ  ಈ ಭೀಕರ ಅಪಘಾತ ಸಂಭವಿಸಿದೆ. ಕಾರು 600 ಅಡಿ ಆಳದ ಕಂದಕಕ್ಕೆ ಬಿದ್ದು ಅದರಲ್ಲಿದ್ದ ಆರು ಜನರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ನಿಫಾದ್ ತಾಲ್ಲೂಕಿನ ಪಿಂಪಾಲ್‌ಗಾಂವ್ ಬಸ್ವಂತ್‌ನವರು ಎಂದು ಅಧಿಕಾರಿ ತಿಳಿಸಿದ್ದಾರೆ.

ತೀರ್ಥಯಾತ್ರೆ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದ್ದು, ಮೂಲಗಳ ಪ್ರಕಾರ ಇನ್ನೋವಾ ಕಾರಿನಲ್ಲಿ ಪೂಜ್ಯ ಸಪ್ತಶೃಂಗಿ ದೇವಿ ದೇವಸ್ಥಾನಕ್ಕೆ ತೀರ್ಥಯಾತ್ರೆ ಹೋಗಿ ಹಿಂದಿರುಗುತ್ತಿದ್ದಾಗ ಕಾರು ಕಂದಕಕ್ಕೆ ಉರುಳಿದೆ. ಅಪಘಾತದ ಸಂದರ್ಭದಲ್ಲಿ ಕಾರಿನಲ್ಲಿ ಒಟ್ಟು 7ಮಂದಿ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಈ ಪೈಕಿ 6 ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು ಕೀರ್ತಿ ಪಟೇಲ್ (50), ರಸೀಲಾ ಪಟೇಲ್ (50), ವಿಠ್ಠಲ್ ಪಟೇಲ್ (65), ಲತಾ ಪಟೇಲ್ (60), ವಚನ್ ಪಟೇಲ್ (60) ಮತ್ತು ಮಣಿಬೆನ್ ಪಟೇಲ್ (70) ಎಂದು ಗುರುತಿಸಲಾಗಿದೆ.

Post a Comment

0 Comments