Ticker

6/recent/ticker-posts

Ad Code

ಕುಸಿದು ಬಿದ್ದು ಗೃಹಿಣಿ ಮೃತ್ಯು

 

ಬದಿಯಡ್ಕ : ಮನೆಯಲ್ಲಿ ಕುಸಿದು ಬಿದ್ದ ಏಣಿಯರ್ಪು ನಿವಾಸಿ ಗೃಹಿಣಿ ಸುಶೀಲಾ (58) ಚಿಕಿತ್ಸೆಯ ನಡುವೆ ಸಾವನ್ನಪ್ಪಿದರು. ಕಳೆದ ತಿಂಗಳು 11 ರಂದು ಸುಶೀಲಾ ಅವರು ಮನೆಯಲ್ಲಿ ಕುಸಿದು ಬಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಾರೋಗ್ಯ ಉಲ್ಬಣಗೊಂಡು ನಿನ್ನೆ ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ಕೃಷ್ಣ, ಮಕ್ಕಳಾದ ರಮ್ಯಾ, ರಂಜಿತ್, ರತೀಶ್, ಅಳಿಯ ಉದಯಕುಮಾರ್, ಸಹೋದರ ಸಹೋದರಿಯರಾದ  ಕೃಷ್ಣನ್, ನಾರಾಯಣಿ, ಮಾಧವಿ, ಮೋಹಿನಿ, ಶಾರದ ಎಂಬವರನ್ನು ಅಗಲಿದ್ದಾರೆ.

Post a Comment

0 Comments