Ticker

6/recent/ticker-posts

Ad Code

ಯುಡಿಎಫ್ ಅಭ್ಯರ್ಥಿ ಕುಸಿದು ಬಿದ್ದು ಮೃತ್ಯು

 

ಯುಡಿಎಫ್ ಅಭ್ಯರ್ಥಿ ಮನೆಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮಲಪ್ಪುರಂ ಜಿಲ್ಲೆಯ ಎಡಕ್ಕರ ಮುತ್ತಾಡಂ ಪಂಚಾಯತಿನ ಏಳನೇ ವಾರ್ಡು ಯುಡಿಎಫ್ ಅಭ್ಯರ್ಥಿ, ಮುಸ್ಲಿಂ ಲೀಗಿನ ವಟ್ಟತ್ತ್ ಹಸೀನ(49)ಮೃತ ಪಟ್ಟವರಾಗಿದ್ದಾರೆ. ಇವರು ಪಾಯಿಂಬಾಡಂ ಅಂಗನವಾಡಿಯ ಅಧ್ಯಾಪಕಿಯಾಗಿದ್ದರು. ನಿನ್ನೆ ಹಗಲಿಡೀ ಗೃಹ ಸಂಪರ್ಕ ನಡೆಸಿ, ಮತದಾರರನ್ನು ಭೇಟಿಯಾಗಿ ರಾತ್ರಿ ವೇಳೆ ಹಲವು ಕುಟುಂಬ ಸಭೆಗಳಲ್ಲೂ ಪಾಲ್ಗೊಂಡು ಬಳಲಿ, ದಣಿದು ಬಂದಿದ್ದರು. ರಾತ್ರಿ 11.15ರ ವೇಳೆಗೆ ದಿಢೀರ್ ಎದೆನೋವು ಕಾಣಿಸಿಕೊಂಡಾಗ ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತಪಟ್ಟರು.

Post a Comment

0 Comments