Ticker

6/recent/ticker-posts

Ad Code

ಮೊಲೆ ಹಾಲು ಸೇವನೆ ವೇಳೆ ಉಸಿರಾಟ ತೊಂದರೆ 8ದಿನಗಳ ಹಸುಳೆ ಮೃತ್ಯು


 ಕಾಸರಗೋಡು : ಮೊಲೆಹಾಲು ಗಂಟಲಲ್ಲಿ ಸಿಲುಕಿ ಕೇವಲ ಎಂಟು ದಿನಗಳ ಹಸುಳೆ ಮೃತಪಟ್ಟ ಘಟನೆ ವರದಿಯಾಗಿದೆ. ಜಿಲ್ಲೆಯ ಕಿನಾನೂರ್ ಕರಿಂದಳಂ ಎಂಬಲ್ಲಿನ ಕಾಳಿಯಾನತ್ತ್ ನಿವಾಸಿ ಅಮೃತಾ ಎಂಬವರ ಮಗು ಮೃತಪಟ್ಟ ದುರ್ದೖವಿ. ಸೋಮವಾರ ಬೆಳಿಗ್ಗೆ ಎಂಟು ಗಂಟೆಗೆ ಈ ಘಟನೆ ಸಂಭವಿಸಿತು. ಮೊಲೆ ಹಾಲು ಸೇವನೆ ಬಳಿಕ ಮಗುವಿಗೆ ಉಸಿರಾಟ ತೊಂದರೆ ಕಂಡು ಬಂದು ಕೂಡಲೇ ಕಾಞಂಗಾಡಿನ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು. ಮಗುವಿಗೆ ಶ್ವಾಸಕೋಶ ಸಂಬಂಧವಾದ ಅಸೌಖ್ಯವಿದ್ದು, ಅದರ ಉಲ್ಬಣತೆಯಿಂದ ಉಸಿರಾಟ ಸಮಸ್ಯೆಯುಂಟಾಗಿ ಮಗು ಮರಣ ಹೊಂದಿರುವುದಾಗಿ ಮನೆಯವರು ಹೇಳಿದ್ದಾರೆಂದು ಪೊಲೀಸ್ ಪ್ರಕರಣ ದಾಖಲಾಗಿದೆ.

Post a Comment

0 Comments