Ticker

6/recent/ticker-posts

Ad Code

ವ್ಯಾಪಾರಿ ಹೃದಯಾಘಾತದಿಂದ ನಿಧನ

 

ನೀರ್ಚಾಲು : ಏಣಿಯರ್ಪು ನಿವಾಸಿ ವ್ಯಾಪಾರಿ ಅರುಣ್ ಕುಮಾರ್ ಬೀರಿಕುಂಜ (45) ಹೃದಯಾಘಾತದಿಂದ ನಿಧನರಾದರು. ಮೂಲತಃ ಮುಂಡಿತ್ತಡ್ಕದ ಏಣಿಯರ್ಪು ನಿವಾಸಿ ದಿ.ಐತ್ತಪ್ಪ ನಾಯ್ಕ್ ಅವರ ಪುತ್ರ. ಈ ಹಿಂದೆ ಬದಿಯಡ್ಕದ ಮೇಲಿನ ಪೇಟೆಯ ನವಜೀವನ ಶಾಲಾ ರಸ್ತೆಯಲ್ಲಿ ಅಂಗಡಿ ನಡೆಸುತ್ತಿದ್ದರು. ಬಳಿಕ ಕೋರೋನ ಕಾಲಘಟ್ಟದ ನಂತರ ಸಾರಣೆ ಇನ್ನಿತರ ಕೂಲಿ ಕೆಲಸಕ್ಕೆ ತೆರಳುತ್ತಿದ್ದು ಸಂಜೆಯ ವೇಳೆ ನೀರ್ಚಾಲು ಶಾಲಾ ಬಳಿ ಅಂಗಡಿಯೊಂದನ್ನು ನಡೆಸುತ್ತಿದ್ದ ಶ್ರಮಜೀವಿಯಾಗಿದ್ದರು. ಮೃತರು ಮುಂಡಿತ್ತಡ್ಕ  ಶ್ರೀ ಮಹಾವಿಷ್ಣು ಕಲಾ ವೃಂದದ ಸದಸ್ಯರಾಗಿದ್ದು ವಿವೇಕ ಸ್ವಸಹಾಯ ಸಂಘದ ಮಾಜಿ ಅಧ್ಯಕ್ಷರಾಗಿದ್ದಾರೆ. ಮೃತರು ತಾಯಿ ಲಲಿತಾ, ಪತ್ನಿ ರಾಜೇಶ್ವರಿ, ಒಂದು ಹೆಣ್ಣು ಒಂದು ಗಂಡು ಅವಳಿ ಮಕ್ಕಳು ಅಮೃತ್ , ಆಶ್ವಿನಿ ಹಾಗೂ ಸಹೋದರರಾದ ದಾಮೋದರ ,ಜಗದೀಶ ಸಹಿತ ಅಪಾರ ಬಂಧುಬಳಗವನ್ನಗಲಿದ್ದಾರೆ.

Post a Comment

0 Comments