ತಿರುವನಂತಪುರ: ರಾಜ್ಯದ ತ್ರಿಸ್ತರ ಪಂಚಾಯತ್ ಚುನಾವಣೆ ಕಾವು ಏರುತ್ತಿದ್ದಂತೆ ನಾಮಪತ್ರಿಕೆ ಸಲ್ಲಿಕೆ ದಿನಾಂಕ ಶುಕ್ರವಾರ ಸಂಜೆ ಕೊನೆಗೊಂಡಿದೆ. ಇಂದು ನಾಮ ಪತ್ರಿಕೆಗಳ ತೀವ್ರ ಪರಿಶೀಲನೆ ನಡೆಯಲಿದೆ. 14 ಜಿಲ್ಲೆಗಳಲ್ಲಿ ಒಟ್ಟು 108580 ಅಭ್ಯರ್ಥಿಗಳು ನಾಮಪತ್ರಿಕೆ ಸಲ್ಲಿಸಿದ್ದಾರೆ. ಈ ತಿಂಗಳ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ಉಳಿದ ನಾಮಪತ್ರಿಕೆಗಳನ್ನು ಪರಿಶೀಲಿಸಿದ ನಂತರ ಹಿಂಪಡೆದಾಗ ಮಾತ್ರ ಚುನಾವಣೆಯ ನಿಜವಾದ ಚಿತ್ರಣ ಸ್ಪಷ್ಟವಾಗುತ್ತದೆ. ಇಂದು ಚುನಾವಣಾ ಅಧಿಕಾರಿಗಳು ಸೂಕ್ಷ್ಮ ಪರಿಶೋಧನೆ ನಿರತರಾಗಿದ್ದಾರೆ. ಅಂತಿಮ ಪರಿಶೀಲನೆಯ ನಂತರ, ಚುನಾವಣಾಧಿಕಾರಿ ನಾಮಪತ್ರಗಳನ್ನು ಅಂಗೀಕರಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಪಡಿಸುವರು ಎಂದು ಚುನಾವಣಾ ಆಯೋಗ ಸೂಚಿಸಿದೆ.

0 Comments