ಉಪ್ಪಳ : ತ್ರಿಸ್ತರ ಪಂಚಾಯತ್ ಚುನಾವಣೆಯ ನಾಮಪತ್ರಿಕೆ ಸಲ್ಲಿಕೆಯಾಗಿ ಸೂಕ್ಷ್ಮ ಪರಿಶೋಧನೆಗೆ ಮುಂಚಿತವಾಗಿಯೇ ಅಭ್ಯರ್ಥಿಯೋರ್ವೆ ಅವಿರೋಧವಾಗಿ ಆಯ್ಕೆಯಾದ ಪ್ರಕ್ರಿಯೆ ಮಂಗಲ್ಪಾಡಿ ಗ್ರಾ. ಪಂ. ನಲ್ಲಿ ನಡೆದಿದೆ. ಇಲ್ಲಿನ 24ನೇ ಮಣಿಮುಂಡ ವಾರ್ಡಿನಲ್ಲಿ ಮುಸ್ಲಿಂಲೀಗ್ ಅಭ್ಯರ್ಥಿ ಶಮೀಮ ಟೀಚರ್ ಅವಿರೋಧ ಆಯ್ಕೆಯಾಗಿದ್ದಾರೆ. ಇವರು ಮುಸ್ಲಿಂಲೀಗ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಬಿಜೆಪಿ ಮತ್ತು ಎಡರಂಗ ಮತ್ತು ಇತರ ಅಭ್ಯರ್ಥಿಗಳು ಸ್ಪರ್ಧಿಸಲು ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ನಡೆದಿದೆ. ಶಮೀಮ ಟೀಚರ್ ಈ ಹಿಂದೆ ಮಂಜೇಶ್ವರ ಬ್ಲೋಕ್ ಪಂಚಾಯತಿನ ನಿಕಟಪೂರ್ವ ಅಧ್ಯಕ್ಷೆಯಾಗಿ ಜನಾನುರಾಗಿಯಾಗಿದ್ದಾರೆ.

0 Comments