ಕುಂಬಳೆ : ಕಾಸರಗೋಡು ಜಿಲ್ಲಾ ಪಂಚಾಯತ್ ಪುತ್ತಿಗೆ ಹಾಗೂ ಬೇಕಲ ಡಿವಿಶನ್ ಮರು ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಪುತ್ತಿಗೆಯಲ್ಲಿ ಯುಡಿಎಫ್ ನ ಜೆ.ಎಸ್.ಸೋಮಶೇಖರ
438 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬೇಕಲದಲ್ಲಿ ಎಲ್‌ಡಿಎಫ್‌ನ ಟಿ.ವಿ.ರಾಧಿಕಾ 267 ಮತಗಳಿಂದ ಗೆಲುವು ಪುನಃ ನಿಶ್ಚಿತಗೊಳಿಸಿದ್ದಾರೆ. ಜಿ.ಪಂ.ಪುತ್ತಿಗೆ ಡಿವಿಶನ್ ನಲ್ಲಿ
ಜಿದ್ದಾಜಿದ್ದಿನ ಹೋರಾಟ ನಡೆದು ಕೊನೆಯ ಕ್ಷಣದಲ್ಲಿ ಜಯ ಸೋಮಶೇಖರರ ಪರವಾಗಿತ್ತು.
ಶನಿವಾರ ಅಪರಾಹ್ನ ಪೂರ್ಣಗೊಂಡ ಸೋಮಶೇಖರ ಅವರ ಗೆಲುವನ್ನು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಮಣಿಕಂಠ ರೈ ನೀಡಿದ ದೂರಿನ ಹಿನ್ನೆಲೆಯಲ್ಲಿ ಪುತ್ತಿಗೆ ವಿಭಾಗದಲ್ಲಿ ಮರು ಎಣಿಕೆಗೆ ಅವಕಾಶ ಕಲ್ಪಿಸಲಾಗಿತ್ತು.ಎಣ್ಮಕಜೆ ಪಂಚಾಯಿತಿಯ 9 ಬೂತ್ ಗಳ ಮತಗಳನ್ನು ಮರು ಎಣಿಕೆ ಮಾಡುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.
ಎಣ್ಮಕಜೆಯ 5,6,11,12,13,14, 15,17,18 ಬೂತ್ ಗಳ ಮತ ಪುನರ್ ಎಣಿಕೆಗೆ ಒತ್ತಾಯಿಸಲಾಗಿತ್ತು. ಈ ಬೂತ್ ಗಳಲ್ಲಿ ವಾರ್ಡ್ ಮಟ್ಟದಲ್ಲಿ ಬಿಜೆಪಿಗೆ ಅರ್ಹ ಮತಗಳಿದ್ದು ಜಿಲ್ಲಾ ಪಂ.ಡಿವಿಶನ್ ನಲ್ಲಿ ಈ ಮತಗಳು ವ್ಯಕ್ತಿಗತವಾಗಿ ಸೋಮಶೇಖರರ ಪಾಲಾಗಿದೆ. ಇದನ್ನು ನಂಬಲಾಗದ ಬಿಜೆಪಿಯು ಮರು ಎಣಿಕೆಯತ್ತ ವಿಶ್ವಾಸ ವ್ಯಕ್ತಪಡಿಸಿತ್ತು.
ಕಳೆದ ಎರಡು ಅವಧಿಯಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷರಾಗಿ ಅಭಿವೃದ್ಧಿಯ ರೂವಾರಿಯಾಗಿದ್ದ ಸೋಮಶೇಖರ ಜೆ.ಎಸ್. ಈ ಪಂಚಾಯತಿನ ಪ್ರಗತಿಯಲ್ಲಿ ಶೈಕ್ಷಣಿಕ, ಸಮುದಾಯಿಕ ಹಾಗೂ ಸಾರ್ವತ್ರಿಕವಾಗಿ ಗುರುತಿಸಿಕೊಳ್ಳಲು ಪ್ರಮುಖ ಕಾರಣವಾಗಿದ್ದರು. ವಿದ್ಯಾರ್ಥಿ ನಾಯಕತ್ವದಿಂದ ಸಾರ್ವಜನಿಕ ಸೇವೆಯವರೆಗೆ ಸರಳತೆ, ನಿಷ್ಠೆ ಮತ್ತು ತ್ಯಾಗಭಾವದಿಂದ ಕೂಡಿದ ದೀರ್ಘ ಸೇವಾಪಥವನ್ನು ನಿರ್ಮಿಸಿಕೊಂಡ ವ್ಯಕ್ತಿತ್ಚ. ಎಣ್ಮಕಜೆ ಎಂಬ ಸಾಂಸ್ಕೃತಿಕವಾಗಿ ಸಮೃದ್ಧವಾದ ಪ್ರದೇಶದಲ್ಲಿ ಬೆಳೆದ ಅವರು, ಬಾಲ್ಯದಿಂದಲೇ ವಿದ್ಯಾರ್ಥಿ ಸಂಘಟನೆಗಳು, ಸ್ಥಳೀಯ ಹೋರಾಟಗಳು ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದು, ಜನರ ಅಗತ್ಯಗಳನ್ನು ಆಳವಾಗಿ ಗ್ರಹಿಸಿದರು.
ವಿದ್ಯಾರ್ಥಿ ಜೀವನದಿಂದಲೇ ಇವರು ಮಾಡಿದ ಸಂಘಟನಾ ಕಾರ್ಯವೈಖರಿ, ಜನರ ಪರ ನಿಲ್ಲುವ ಧೈರ್ಯ, ಹಾಗು ಸಾರ್ವಜನಿಕ ನಿಲುವುಗಳ ಅರಿವು— ಅನುಭವಗಳು ಅವರ ಸಾರ್ವಜನಿಕ ಜೀವನಕ್ಕೆ ಗಟ್ಟಿಯಾದ ಅಡಿಪಾಯವಾಗಿದ್ದವು.
ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮಾಡಿದ ಆಡಳಿತ. ಜನಸಮುದಾಯದ ಪ್ರತಿಯೊಂದು ವರ್ಗವನ್ನೂ ಸ್ಪರ್ಶಿಸುವ, ಸ್ಪಷ್ಟತೆ ಮತ್ತು ಜನಪರತೆಯನ್ನು ಹಿರಿದಾಗಿ ಹಿಡಿದ ಸಮಗ್ರ ಅಭಿವೃದ್ಧಿಯ ಮೇಲೆ ಅವರು ಹೆಚ್ಚು ಒತ್ತು ನೀಡಿರುವುದೇ ಅವರನ್ನು ಜನ ಪುತ್ತಿಗೆ ಹಾಗೂ ಪೈವಳಿಕೆ ಪಂಚಾಯತುಗಳಲ್ಲೂ ಜನ ಬೆಂಬಲಿಸಲು ಮುಖ್ಯ ಕಾರಣ ಎಂಬುದು ಜನಜನಿತವಾಗಿದೆ.


0 Comments