Ticker

6/recent/ticker-posts

Ad Code

ಮೇಯಲು ಬಿಟ್ಟ ದನಗಳನ್ನು ಕಡಿದು ಕೊಂದ ದುಷ್ಕರ್ಮಿಗಳು : ಕಳೇಬರ ಪತ್ತೆ

 

ಮಂಗಳೂರು:  ಮೇಯಲು ಬಿಟ್ಟ ದನಗಳನ್ನು ಕದ್ದು ಗೋ ಹತ್ಯೆ ಮಾಡಿ ಕಳೆಬರವನ್ನು ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ರೀತಿಯ ಅಕ್ರಮ ಗೋ ಹತ್ಯೆ ಮಂಗಳೂರಿನ ಕೆಂಜಾರಿನಲ್ಲಿ ನಡೆದಿದೆ. ಗೋಹತ್ಯೆ ಮಾಡಿದ ಸ್ಥಳದಲ್ಲಿ ಮೂರು ದನಗಳು ಪತ್ತೆಯಾಗಿವೆ . ನದಿ ಪಕ್ಕದಲ್ಲೇ ಗೋ ಹತ್ಯೆ ಮಾಡಿ ದುಷ್ಕರ್ಮಿಗಳು ಕಳೇಬರ ಎಸೆದಿದ್ದಾರೆ. ಪರಿಸರದ ತುಂಬಾ ತ್ಯಾಜ್ಯಗಳು ಕೊಳೆತು ನಾರುತ್ತಿರುವ ಹಿನ್ನಲೆಯಲ್ಲಿ ಸ್ಥಳಕ್ಕೆ ಹಿಂದೂ ಕಾರ್ಯಕರ್ತರು ಭೇಟಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಜಪೆ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳೀಯವಾಗಿ ದನಗಳನ್ನು ಕಳೆದುಕೊಂಡವರ ಮಾಹಿತಿಯನ್ನು ಪೊಲೀಸರು ಪಡೆದಿದ್ದಾರೆ. ಬಜಪೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Post a Comment

0 Comments