Ticker

6/recent/ticker-posts

Ad Code

ಕುಂಬ್ಡಾಜೆ ಪಂ.ನಲ್ಲಿ ರೋಚಕ ಗೆಲುವು ದಾಖಲಿಸಿದ ಬಿಜೆಪಿಯ ಮಹೇಶ್ ಅಜ್ಜಿಮೂಲೆ

 

ಏತಡ್ಕ : ಐಕ್ಯರಂಗದ ಸಿಟ್ಟಿಂಗ್ ಸೀಟ್ ಎಂದೇ ಪರಿಗಣಿಸಲ್ಪಟ್ಟಿದ್ದ ಕುಂಬ್ಡಾಜೆ ಗ್ರಾಮ ಪಂಚಾಯತಿನ 1ನೇ ವಾರ್ಡ್ ಮುನಿಯೂರಿನಲ್ಲಿ ಬಿಜೆಪಿ ರೋಚಕ ಗೆಲುವು ಕಂಡಿದೆ.ಬಿಜೆಪಿ ಅಭ್ಯರ್ಥಿ ಮಹೇಶ್ ಅಜ್ಜಿಮೂಲೆಗೆ 201ಮತಗಳ ಅಂತರದ ದಾಖಲೆಯ ಗೆಲುವು ಲಭಿಸಿದೆ.  ಐಕ್ಯರಂಗದ ಅಭ್ಯರ್ಥಿ ಮಾಜಿ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದ ಅನಂದ ಮವ್ವಾರಿಗೆ ಈ ಬಾರಿ ಹೀನಾಯ ಸೋಲಾಗಿದೆ. ಮಹೇಶ ಅಜ್ಜಿಮೂಲೆ  494 ಮತ, ಅನಂದ ಮವ್ವಾರು 293 ಮತ ಪಿಡಿಪಿಯ ಅಭ್ಯರ್ಥಿ ಅಬೂಬಕ್ಕರ್  70 ಮತಗಳನ್ನು ಈ ವಾರ್ಡಿನಲ್ಲಿ ಗಳಿಸಿಕೊಂಡಿದ್ದಾರೆ. ಕುಂಬ್ಡಾಜೆ ಪಂಚಾಯತಿನ 14 ವಾರ್ಡ್ ಗಳಲ್ಲಿ 7 ಬಿಜೆಪಿ, 6 ಯುಡಿಎಫ್, 1 ಎಲ್ ಡಿ ಎಫ್ ಸ್ಥಾನಗಳನ್ನು ಗಳಿಸಿಕೊಂಡಿದೆ.

Post a Comment

0 Comments