ಮುಳ್ಳೇರಿಯ: 9ನೇ ತರಗತಿ ವಿದ್ಯಾರ್ಥಿಯೋರ್ವ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಳ್ಳೂರು ಕುಂಜತೊಟ್ಟಿಯ ಪ್ರಜ್ವಲ್ (14) ಮೃತ ಬಾಲಕ. ಈತ ಬೆಳ್ಳೂರು ಪ್ರೌಢಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ. ಶಾಲೆಯಲ್ಲಿ ಪರೀಕ್ಷೆ ಇದ್ದ ಕಾರಣ ನಿನ್ನೆ (ಸೋಮವಾರ) ಮಧ್ಯಾಹ್ನ ಮನೆಗೆ ಬಂದಿದ್ದನು. ಈತನ ಸಹೋದರಿ ಮುಳ್ಳೇರಿಯಾದ ವಿದ್ಯಾಶ್ರೀ ಶಾಲೆಯಲ್ಲಿ ಓದುತ್ತಿರುವ ಕಾರಣ ಮನೆಯವರು ಆಕೆಯನ್ನು ಕರೆದುಕೊಂಡು ಬರಲು ಹೋಗಿದ್ದರು. ಪುನಃ ಮನೆಗೆ ಬಂದು ನೋಡಿದಾಗ ಬೆಡ್ರೂಮ್ ಫ್ಯಾನ್ ಗೆ ಪ್ರಜ್ವಲ್ ನೇಣು ಹಾಕಿ ನೇತಾಡುತ್ತಿರುವುದು ಕಂಡು ಬಂದಿದೆ. ಈತ ಜಯಕರನ್ ಮತ್ತು ಅನಿತಾ ದಂಪತಿಯ ಪುತ್ರನಾಗಿದ್ದು ಶಾಲೆಯಲ್ಲಿ ಪ್ರತಿಭಾವಂತನಾಗಿದ್ದಾನೆ. ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

0 Comments