Ticker

6/recent/ticker-posts

Ad Code

ನೀರ್ಚಾಲಿನಲ್ಲಿ ಕಾರು ಮತ್ತು ಸ್ಕೂಟರ್ ಡಿಕ್ಕಿ : ಸವಾರ ಸ್ಥಳದಲ್ಲಿಯೇ ದಾರುಣ ಮೃತ್ಯು


 ಬದಿಯಡ್ಕ : ನೀರ್ಚಾಲಿನಲ್ಲಿ ಕಾರು ಮತ್ತು ಸ್ಕೂಟರ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ  ಸಾವನ್ನಪ್ಪಿದ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ‌.ಕನ್ಯಪ್ಪಾಡಿ ಬಳಿಯ ಮಾಡತ್ತಡ್ಕದ  ಮುಹಮ್ಮದ್ ಝೈನುದ್ದೀನ್ (28)  ಮೃತ ಯುವಕ. ಸೀತಾಂಗೋಳಿ ಪೆಟ್ರೋಲ್ ಪಂಪ್ ಉದ್ಯೋಗಿಯಾಗಿರುವ ಈತ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಕರ್ತವ್ಯಕ್ಕೆ ತೆರಳುವ ವೇಳೆ ನೀರ್ಚಾಲು ಶಾಲೆಯ ಬಳಿ ಅಪಘಾತ ಸಂಭವಿಸಿದೆ.  ಕುಂಬಳೆ ಕಡೆಯಿಂದ ಬರುತ್ತಿದ್ದ ಕಾರಿಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ.ರಸ್ತೆಯಲ್ಲಿ ಹೋಗುತ್ತಿದ್ದ ನಾಯಿಯನ್ನು ತಪ್ಪಿಸಲು ಕಾರು ವಿರುದ್ಧ ದಿಕ್ಕಿನಲ್ಲಿ ಸಂಚರಿಸಿರುವುದೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಝೈನುದ್ದೀನ್ ನ ಸ್ಕೂಟಿ ಪೂರ್ತಿ ನುಜ್ಜುಗುಜ್ಜಾಗಿದ್ದು ಅವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತ ಯುವಕ  ಮಾಡತ್ತಡ್ಕದ ಅಬ್ದುರ್ ರೆಹಮಾನ್ ಮತ್ತು ಆಯೇಷಾ ದಂಪತಿಯ ಪುತ್ರ.ಮೃತರು ಪತ್ನಿ ಫೌಜಿಯಾ. ಏಕ ಪುತ್ರ ಇಬಾನ್,  ಸಹೋದರರಾದ ಅಬ್ದುಲ್ ಖಾದರ್ ಮತ್ತು ರಫಿಯಾ ಎಂಬಿವರನ್ನಗಲಿದ್ದಾರೆ. ಬಡ ಕುಟುಂಬದ ಯುವಕ ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದ. ನಾಡು ಶೋಕ ಸಾಗರವಾಗಿದೆ.

Post a Comment

0 Comments