Ticker

6/recent/ticker-posts

Ad Code

ಹೊಂಸ್ಟೇ ನೆಪದಲ್ಲಿ ಎಂಡಿಎಂಎ ದಂಧೆ : ಯುವತಿ ಸಹಿತ ಐವರ ಬಂಧನ


 ಮುಳ್ಳೇರಿಯ : ಅಡೂರುನ ಕೊಪ್ಪಲಂ ಎಂಬಲ್ಲಿ ಹೊಂಸ್ಟೇ ನೆಪದಲ್ಲಿ ಎಂಡಿಎಂಎ  ಮಾರಾಟ ಮಾಡುತ್ತಿದ್ದ  ಜಾಲದ ಕೊಂಡಿಗಳಾಗಿರುವ ಐದು ಮಂದಿಯನ್ನು  ಆದೂರು ಪೊಲೀಸರು ಬಂದಿಸಿದ್ದಾರೆ. ಯುವತಿ ಸಹಿತ ಐವರು ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ. ಇವರಿಂದ 4.22 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಸಿರಿಬಾಗಿಲು ಬೈರಂ ಹೌಸ್ ನ ಅಬೂಬಕರ್ ಸಿದ್ದೀಕ್ (32), ಅಣಂಗೂರಿನ ಎಸ್. ಜಸ್ಮಿನಾ(26), ಅಡ್ಕತ್ತಬೈಲು ಅಮೀರ್ ಮಂಜಿಲ್ ನ ಅಮೀರ್. ಬಿ.ಎಂ (26), ಪಟ್ಲ ಬುಡ್ ಹೌಸ್ ನ ಅಬ್ದುಲ್ ರವೂಫ್ (29) ಮತ್ತು ಅಡ್ಕತ್ತಬೈಲು  ಮುಹಮ್ಮದ್ ಮುಬ್ತಾಸಿಂ (28) ಬಂಧಿತರು. ಆದೂರು ಎಸ್ ಐ ಜೋನ್ ಎಂ.ಎಸ್ ಅವರಿಗೆ ದೊರೆತ ಗೌಪ್ಯ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ಆದೂರು ಪೊಲೀಸ್ ಇನ್ಸ್ ಪೆಕ್ಟರ್ ವಿಷ್ಣುಪ್ರಸಾದ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Post a Comment

0 Comments