ಕುಂಬಳೆ : ಸಿಪಿಎಂ ಕುಂಬಳೆ ಏರಿಯಾ ಮಾಜಿ ಕಾರ್ಯದರ್ಶಿ, ಪ್ರಸ್ತುತ ಎಣ್ಮಕಜೆ ಪಂ.ಸದಸ್ಯರಾಗಿರುವ ಸುಧಾಕರನ್ ಅವರ ವಿರುದ್ಧ ಲೈಂಗಿಕ ಪೀಡನೆ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಪಕ್ಷದ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ. ಇವರ ಮೇಲಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಸಿಪಿಎಂ ಕುಂಬಳೆ ಏರಿಯಾ ಸಮಿತಿಯ ಮೂವರು ನಾಯಕರಿಗೆ ಹೊಣೆಗಾರಿಕೆ ವಹಿಸಲಾಗಿದೆ. 1995 ರಿಂದ ಇವರು ಮಹಿಳೆಯೊಬ್ಬರಿಗೆ ನಿರಂತರ ಲೈಂಗಿಕ ಕಿರುಕುಳದ ಜತೆಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಿಜಿಪಿಗೆ ದೂರು ನೀಡಿದ್ದರು. ಈ ಪ್ರಕರಣದ ಬಗ್ಗೆ ಆರೋಪ ಹೊತ್ತಿರುವ ಸುಧಾಕರ್ ತನ್ನ ಪಂಚಾಯತ್ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಎಣ್ಮಕಜೆ ಪಂಚಾಯತು ಸಮಿತಿಯು ಗುರುವಾರ ಸಂಜೆ ಪೆರ್ಲ ಪೇಟೆಯಲ್ಲಿ ಪ್ರತಿಭಟನೆ ನಡೆಸಿತ್ತು.

0 Comments