Ticker

6/recent/ticker-posts

Ad Code

ಸಿಪಿಎಂ ಮಾಜಿ ಏರಿಯಾ ಕಾರ್ಯದರ್ಶಿ ವಿರುದ್ಧ ಲೈಂಗಿಕ ಕಿರುಕುಳ ದೂರು

ಕುಂಬಳೆ:  ಸಿಪಿಎಂ ಕುಂಬಳೆ ಏರಿಯಾ ಮಾಜಿ ಕಾರ್ಯದರ್ಶಿ ವಿರುದ್ಧ ಮಹಿಳೆಯೋರ್ವೆ ಲೈಂಗಿಕ ಕಿರುಕುಳದ ದೂರು ನೀಡಿದ್ದಾರೆ. ಮಾಜಿ ಕಾರ್ಯದರ್ಶಿ ಸುಧಾಕರ ಎಂಬವರ ವಿರುದ್ಧವಾಗಿ ಮಹಿಳೆಯೊಬ್ಬರು ಡಿಜಿಪಿಗೆ ದೂರು ನೀಡಿದ್ದಾರೆ, 1995 ರಿಂದ 2023 ರವರೆಗೆ ಅವರು ನಿರಂತರ  ಲೈಂಗಿಕ ಕಿರುಕುಳ ನೀಡುತ್ತಿದ್ದು ಈ ಬಗ್ಗೆ ದೂರು ನೀಡಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಗಳೊಂದಿಗೆ ಮಹಿಳೆ ಈ ನೇತಾರನ‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎರಡು ದಶಕಗಳ ಕಾಲ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಮತ್ತು ತನ್ನ ಪತಿಗೆ ವಿಚ್ಛೇದನ ನೀಡುವಂತೆ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಸುಧಾಕರನ್ ವಿರುದ್ಧ ದೂರು ದಾಖಲಿಸಲಾಗಿದೆ.

Post a Comment

0 Comments