ಉಪ್ಪಳ : ಪೈವಳಿಕೆ ಗ್ರಾಮ ಪಂಚಾಯತ್ ಸ್ಟ್ಯಾಂಡಿಂಗ್ ಕಮಿಟಿ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವ ಮೂಲಕ ಯುಡಿಎಫ್ ಅಪವಿತ್ರ ಮೈತ್ರಿ ಮಾಡಿಕೊಂಡಿದೆ ಎಂದು ಎಡರಂಗ ಆರೋಪಿಸಿದೆ. ಪೈವಳಿಕೆ ಪಂಚಾಯತ್ ನ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 8ನೇ ವಾರ್ಡ್ ಬೆರಿಪದವಿನಿಂದ ಗೆದ್ದ ರಾಮಕೃಷ್ಣ ಬಲ್ಲಾಳ್ ಅವರಿಗೆ ಯುಡಿಎಫ್ ಸದಸ್ಯರು ಮತ ಚಲಾಯಿಸಿರುವುದು ಅಪವಿತ್ರ ಮೈತ್ರಿ ಎಂದು ಸಿಪಿಐಎಂ ಟೀಕಿಸಿದೆ. ಯುಡಿಎಫ್ ನಿಂದ ಚುನಾಯಿತಳಾದ 16ನೇ ವಾರ್ಡ್, ಕೊಕ್ಕೆಚ್ಚಾಲ್ ನ ಪ್ರಿನ್ಸಿ ಡಿ ಸೋಜಾ, 21ನೇ ವಾರ್ಡ್ ಕಡೆಂಕೋಡಿಯ ಮೈಮೂನಾ ಮಿಸ್ರಿಯಾ, 2ನೇ ವಾರ್ಡ್ ಸಿರಂತಡ್ಕದ ಜಾಕೀರ್ ಹುಸೇನ್, 12ನೇ ವಾರ್ಡ್, ಪೆರ್ಮುದೆಯ ಶ್ರೀನಿವಾಸ ಮಾಸ್ತರ್ ಬಿಜೆಪಿಗೆ ಮತ ಚಲಾಯಿಸಿದ ಸದಸ್ಯರಾಗಿದ್ದು ಈ ಕೋಲಿಬಿ ಮೈತ್ರಿಯನ್ನು ಎಡಪಕ್ಷಗಳು ಬಹಿರಂಗವಾಗಿ ಖಂಡಿಸಿ ಪೈವಳಿಕೆ ಪೇಟೆಯಲ್ಲಿ ಮೆರವಣಿಗೆ ನಡೆಸಿದವು. ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚಾಸ್ಪದ ವಿಷಯವಾಗಿದೆ.

0 Comments