Ticker

6/recent/ticker-posts

Ad Code

ಬದಿಯಡ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಟೋ ಚಾಲಕ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತ್ಯು

 

ಬದಿಯಡ್ಕ : ಆಟೋರಿಕ್ಷಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದ ಆಟೋ ಚಾಲಕ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಸಾವನ್ನಪ್ಪಿದ್ದಾರೆ. ಮೃತರನ್ನು ಅರವಿಂದ ಅಲಿಯಾಸ್ ರವಿ (47) ಎಂದು ಗುರುತಿಸಲಾಗಿದೆ, ಇವರು ಬದಿಯಡ್ಕದ  ಬಾರಡ್ಕ‌ ನಿವಾಸಿಯಾಗಿದ್ದು, ಪ್ರಸ್ತುತ  ಬದಿಯಡ್ಕ  ರಿಜಿಸ್ಟಾರ್ ಕಚೇರಿಯ ಎದುರಿನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ.  ನಿನ್ನೆ ರಾತ್ರಿ ಬದಿಯಡ್ಕದ  ಹೋಟೆಲೊಂದರ ಬಳಿ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು.  ತಕ್ಷಣವೇ ಅವರನ್ನು ನಾಯಮ್ಮಾರ್  ಮೂಲೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಜೀವ ಉಳಿಸಲಾಗಲಿಲ್ಲ. ಸಾವಿಗೆ ಕಾರಣ ತಿಳಿದುಬಂದಿಲ್ಲ. ಮೃತರು  ತಂದೆ ರಾಮ, ತಾಯಿ ಕಮಲಾಕ್ಷಿ, ಪತ್ನಿ ಅಶ್ವಿನಿ ಹಾಗೂ  ಎರಡನೇ ತರಗತಿಯ ವಿದ್ಯಾರ್ಥಿಯಾಗಿರುವ ಒರ್ವ ಪುತ್ರ, ಸಹೋದರರಾದ ರಾಜೇಂದ್ರ ಕುಮಾರ್ (ಮೆಡಿಕಲ್ ರೆಪ್), ಜ್ಯೋತಿ ಪ್ರಕಾಶ್ (ಆಟೋ ಚಾಲಕ), ಅನಿಲ್ ಕುಮಾರ್ (ಡ್ರೈವರ್) ಎಂಬಿವರನ್ನಗಲಿದ್ದಾರೆ.

Post a Comment

0 Comments