ಪೆರ್ಲ : ಬೆದ್ರಂಪಳ್ಳ ಸಮೀಪದ ನಡುಬೈಲು ಎಂಬಲ್ಲಿ ಹೆಂಚಿನ ಮನೆಯೊಂದು ಶಾರ್ಟ್ ಸರ್ಕ್ಯೂಟ್ ಕಾರಣ ಉರಿದು ಸಂಪೂರ್ಣ ಬೂದಿಯಾದ ಘಟನೆ ಇಂದು ಸಂಜೆ 4ಗಂಟೆಗೆ ನಡೆದಿರುವುದಾಗಿ ವರದಿಯಾಗಿದೆ. ಪೆರ್ಲ ಪೇಟೆಯಲ್ಲಿ ವಾಹನ ಬಾಡಿಗೆ ನಡೆಸುತ್ತಿರುವ ಚಾಲಕರಾದ ರಮೇಶ್ಚಂದ್ರ ರೈ ಎಂಬವರ ಮನೆ ಇದಾಗಿದೆ. ಇವರು ಸಂಕ್ರಮಣವಾದ ಕಾರಣ ತರವಾಡು ಸಂಬಂಧ ಕಾರ್ಯಕ್ಕಾಗಿ ಪೆರುವಾಯಿಯ ದೇವಸ್ಥಾನವೊಂದಕ್ಕೆ ತೆರಳಿದ್ದು ಪತ್ನಿ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಶಾಲೆಗೆ ತೆರಳಿದ ಕಾರಣ ಮನೆಯಲ್ಲಿ ಯಾರು ಇಲ್ಲವಾದ್ದರಿಂದ ಘಟನೆ ಅರಿವಿಗೆ ಬರುವಾಗ ಬೆಂಕಿ ಪೂರ್ತಿ ಹತ್ತಿಕೊಂಡಿದೆ.


0 Comments