Ticker

6/recent/ticker-posts

Ad Code

ಬಿದ್ದು ಸಿಕ್ಕಿದ ಹಣವನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಹರಿತ ಕರ್ಮಸೇನಾ ಕಾರ್ಯಕರ್ತೆಯರಿಗೆ ಅಭಿನಂದನೆ

 

ಬದಿಯಡ್ಕ: ಕರ್ತವ್ಯದ ಮಧ್ಯೆ ಬಿದ್ದು ಸಿಕ್ಕಿದ ಹಣವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಆದರ್ಶ ಮೆರೆದ ಹರಿತ ಕರ್ಮಸೇನಾ ಕಾರ್ಯಕರ್ತೆಯರಿಗೆ ಗ್ರಾಮ ಪಂಚಾಯತು ಅಧ್ಯಕ್ಷರ ನೇತೃತ್ವದಲ್ಲಿ ಗೌರವಿಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯತು  ಮೂಕಂಪಾರೆ 5ನೇ ವಾರ್ಡಿನ ಹರಿತ ಕರ್ಮ ಸೇನೆಯ ಕಾರ್ಯಕರ್ತೆಯರಾದ ಸತ್ಯಪ್ರೇಮ, ರೇಖ ಎಂಬಿವರಿಗೆ ಮೂಕಂಪಾರೆ ಶ್ರೀರಾಮ ಮಂದಿರ ಬಳಿಯಿಂದ ಹಣ ಬಿದ್ದು ಸಿಕ್ಕಿತ್ತು. ಈ ಹಣವನ್ನು ಅವರು ಕೂಡಲೇ ಬದಿಯಡ್ಕ ಪೊಲೀಸರಿಗೆ ಒಪ್ಪಿಸಿ ಆದರ್ಶ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಗ್ರಾಮ ಪಂಚಾಯತು ಅಧ್ಯಕ್ಷ ಶಂಕರ ಡಿ. ಅವರು ಶಾಲು ಹೊದಿಸಿ ಅಭಿನಂದಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷೆ ಅಶ್ವಿನಿ.ಕೆ.ಎಂ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಹಮೀದ್ ಕೆಡೆಂಜಿ, ರಜನಿ ಸಂದೀಪ್, ಅವಿನಾಶ್.ವಿ.ರೈ, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಉಷ ಪಳ್ಳತ್ತಡ್ಕ, ಶ್ಯಾಮ ಪ್ರಸಾದ್ ಸರಳಿ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments