ಪೆರ್ಲ : ಮನೆ ಸಮೀಪವಿದ್ದ ಆವರಣವಿಲ್ಲದ ಬಾವಿಗೆ ಕಾಲು ಜಾರಿ ಬಿದ್ದ ಬಾಲಕಿಯನ್ನು ಅಗ್ನಿಶಾಮಕ ದಳ ಆಗಮಿಸಿ ರಕ್ಷಿಸಿದ ಘಟನೆ ಬೆದ್ರಂಪಳ್ಳದಲ್ಲಿ ನಡೆದಿದೆ. ಬೆದ್ರಂಪಳ್ಳದಿಂದ ನಡುಬೈಲು ರಸ್ತೆಯಲ್ಲಿದ್ದ ಮನೆಯೊಂದರ ಬಾವಿಗೆ ಹದಿನೇಳು ವರುಷ ಪ್ರಾಯದ ಸಜಿನ ಎಂಬ ಬಾಲಕಿ ಬಿದ್ದಿದ್ದಳು. ಬಾವಿ ಸಮೀಪ ಇದ್ದ ವಿಳ್ಯದೆಲೆ ಕೊಯ್ಯಲು ಈಕೆ ತೆರಳಿರುವುದಾಗಿ ಮನೆಯವರು ತಿಳಿಸಿದ್ದಾರೆ. ಬಿದ್ದ ತಕ್ಷಣ ಈಕೆ ಮತ್ತು ಮನೆಯವರು ಬೊಬ್ಬಿಟ್ಟಿದ್ದು ಪಕ್ಕದ ಮಿಲ್ ನ ಕೆಲಸಗಾರರು ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕ ದಳದೊಡನೆ ರಕ್ಷಣಾ ಕಾರ್ಯಕ್ಕೆ ಸಹಕರಿಸಿದ್ದರು.

0 Comments