Ticker

6/recent/ticker-posts

Ad Code

ಬೈಕ್ ಚರಂಡಿಗೆ ಉರುಳಿ ಅರ್ಚಕ ಗಂಭೀರ ಗಾಯ

 

ಬದಿಯಡ್ಕ: ಚೆರ್ಕಳ - ಕಲ್ಲಡ್ಕ ಅಂತರಾಜ್ಯ  ರಸ್ತೆ ಪೂರ್ತಿ ಹೊಂಡಗಳೇ ತುಂಬಿಕೊಂಡಿದ್ದು ಅಪಘಾತ ಇಲ್ಲಿನ ನಿತ್ಯ ಸಂಗತಿಯಾಗಿದೆ. ಇಂದು ಬೆಳಗ್ಗೆ  ಪಳ್ಳತ್ತಡ್ಕ- ಕಾಡಮನೆ ಮಧೈ ರಸ್ತೆ ಹೊಂಡದಲ್ಲಿ ಬಿದ್ದ ಬೈಕ್ ಚರಂಡಿಗೆ ಉರುಳಿ ಅರ್ಚಕರೋರ್ವರು ಗಂಭೀರ ಗಾಯಗೊಂಡ ಘಟನೆ ‌ನಡೆದಿದೆ. ಕರಿಂಬಿಲ ಕೊಡ್ಯಡ್ಕ ನಿವಾಸಿ ಹಾಗೂ ಬಳ್ಳಂಬೆಟ್ಟು ಶ್ರೀ ಶಾಸ್ತಾರ ಕ್ಷೇತ್ರದ ಅರ್ಚಕ ಈಶ್ವರ ಪ್ರಕಾಶ್ ಭಟ್(50) ಗಾಯಗೊಂಡವರಾಗಿದ್ದಾರೆ. ಇವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಶುಕ್ರವಾರ) ಬೆಳಗ್ಗೆ 6.30 ಕ್ಕೆ ಈ ಘಟನೆ ನಡೆದಿದೆ.

      ಕರಿಂಬಿಲ, ಕೊಡ್ಯಡ್ಕದ ಮನೆಯಿಂದ ಬೆಳಗ್ಗೆ 6.15 ಕ್ಕೆ ಇವರು ಬಳ್ಳಂಬೆಟ್ಟು ಕ್ಷೇತ್ರಕೆಂದು ಹೊರಟಿದ್ದರು. ಈ ವೇಳೆ ಕಾಡಮನೆ ಬಳಿ  ಬೈಕ್ ಹೊಂಡಕ್ಕೆ ಬಿದ್ದು ಚರಂಡಿಗೆ ಉರುಳಿದೆ. ಚರಂಡಿಗೆ ಬಿದ್ದು ಗಾಯಗೊಂಡ ಈಶ್ವರ ಪ್ರಕಾಶ್ ಭಟ್ ಅವರು ಅಲ್ಲೇ ಮೂರ್ಚೆ ಹೋಗಿದ್ದರು. ಈ ಮಧ್ಯೆ ಕ್ಷೇತ್ರಕ್ಕೆ ಅರ್ಚಕರು ತಲುಪದೇ ಇದ್ದುದನ್ನು ಮನಗಂಡು ಪದಾಧಿಕಾರಿಗಳು ಹಾಗೂ ಭಕ್ತರು ಹುಡುಕಾಟ ನಡೆಸಿದಾಗ ಕಾಡಮನೆ ಬಳಿ ಇವರು ಬಿದ್ದಿರುವುದು ಕಂಡು ಬಂತು. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಚೆರ್ಕಳ- ಅಡ್ಕಸ್ಥಳ ರಸ್ತೆಯ ನೆಕ್ರಾಜೆಯಿಂದ ಪಳ್ಳತ್ತಡ್ಕದವರೆಗೆ ಬೃಹತ್ ಹೊಂಡಗಳು ಸೃಷ್ಟಿಯಾಗಿದ್ದು ಅಪಘಾತ ನಿತ್ಯ ಘಟನೆಯಾಗಿದೆ. ಈ ರಸ್ತೆಯ ಹೊಂಡಗಳನ್ನು ಮುಚ್ಚಬೇಕೆಂದು ವಿವಿದ ಸಂಘಟನೆಗಳು ಒತ್ತಾಯಿಸಿದ್ದರೂ ಅಧಿಕೃತರು ಮೌನವಾಗಿದ್ದಾರೆ

Post a Comment

0 Comments