Ticker

6/recent/ticker-posts

Ad Code

ಎಣ್ಮಕಜೆ ಪಂಚಾಯತ್ ನ‌ ಗ್ರಂಥಾಲಯಗಳಿಗೆ ಕಥಾ ದೀಪ್ತಿ ಪುಸ್ತಕ ವಿತರಣೆ

 

ಪೆರ್ಲ : ಸವಿ ಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಪ್ರಕಾಶನದಿಂದ ಇತ್ತೀಚೆಗೆ ಮಂಜೇಶ್ವರದ ಗಿಳಿವಿಂಡುವಿನಲ್ಲಿ  ಬಿಡುಗಡೆಯಾದ ಸಂಪಾದಿತ ಕಥಾ ಸಂಕಲನ ಕಥಾದೀಪ್ತಿ ಕೃತಿಯನ್ನು ಎಣ್ಮಕಜೆ ಪಂಚಾಯತ್‌ನ ಎಲ್ಲಾ ಲೈಬ್ರರಿಗಳಿಗೆ ಉಚಿತವಾಗಿ ವಿತರಿಸಲಾಯಿತು. ಹಿರಿಯ ಸಾಹಿತಿ ಹರೀಶ್ ಪೆರ್ಲ ಇವರು ಎಣ್ಮಕಜೆ ಪಂಚಾಯತ್ ಸದಸ್ಯ, ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯಕಾರಿ ಸಮಿತಿ ಸದಸ್ಯ  ರಾಮಚಂದ್ರ ಸ್ವರ್ಗ ಇವರಿಗೆ ಪುಸ್ತಕಗಳನ್ನು  ಹಸ್ತಾಂತರಿಸಿ  ಸಾಹಿತ್ಯವಲಯ  ಪ್ರೋತ್ಸಾಹದಾಯಕವಾಗಿರಲಿ ಎಂದು ಹಾರೈಸಿದರು.

ಸವಿಹೃದಯದ ಕವಿಮಿತ್ರರು ವೇದಿಕೆ ಪೆರ್ಲ ಇದರ ಪ್ರಧಾನ ಸಂಚಾಲಕ, ಸಂಘಟಕ ಸುಭಾಷ್ ಪೆರ್ಲ, ಕವಿ, ವಿಮರ್ಶಕ  ಶ್ರೀನಿವಾಸ ಪೆರಿಕ್ಕಾನ, ಹಾಗೂ ಕವಯತ್ರಿ  ವನಜಾಕ್ಷಿ ಪಿ  ಚೆಂಬ್ರಕಾನ  ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments