Ticker

6/recent/ticker-posts

Ad Code

ಮವ್ವಾರು ಸಮೀಪ ಮುಕ್ಕೂರಿನ ಮನೆಯೊಂದರೊಳಗೆ ಒಂಟಿ ಮಹಿಳೆಯ ಮೃತದೇಹ ಪತ್ತೆ : ಕೊಲೆ ಶಂಕೆ

 

ಬದಿಯಡ್ಕ:  ಕುಂಬ್ಡಾಜೆ ಪಂಚಾಯತು ವ್ಯಾಪ್ತಿಯ ಮವ್ವಾರು ಶಾಲೆ  ಸಮೀಪದ ಮುಕ್ಕೂರು ಬಳಿಯ ಅಜಿಲ ಎಂಬಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮೃತದೇಹ  ಪತ್ತೆಯಾಗಿದ್ದು ಮೃತ ಮಹಿಳೆ  ಪುಷ್ಪಾವತಿ  (67)ಎಂದು ಗುರುತಿಸಲಾಗಿದೆ. ಮನೆಯ ಮಲಗುವ ಕೋಣೆಯಲ್ಲಿ ಶವ ಪತ್ತೆಯಾಗಿದ್ದು, ಕೋಣೆಯಲ್ಲಿ ಎಳೆದಾಡಿದ ಕುರುಹುಗಳು ಪತ್ತೆಯಾಗಿವೆ. ಮೃತ ಮಹಿಳೆಯ ಕೊರಳಲ್ಲಿದ್ದ ಕರಿಮಣಿ ಸರ ಕಾಣೆಯಾಗಿದ್ದು, ಮುಖದಲ್ಲಿ ಉಗುರಿನಿಂದ ಪರಚಿದ ಗಾಯಗಳಿವೆ. ಈಕೆ ಒಂಟಿಯಾಗಿರುವುದನ್ನು ಅರಿತು ಕಳ್ಳರು ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ವೇಳೆ ಪ್ರತಿಭಟಿಸಿದ ಕಾರಣ ಮಹಿಳೆ ಕೊಲೆಗೈಯ್ಯಲ್ಪಟ್ಟಿರಬಹುದೆಂದು ಸಂಶಯ ವ್ಯಕ್ತವಾಗಿದೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Post a Comment

0 Comments