ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕುಂಬಳೆ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮತ್ತು ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಸಿಎ ಸುಬೈರ್ ಸೇರಿದಂತೆ 15 ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಶಾಸಕರನ್ನು ಕಾಸರಗೋಡು ಎಆರ್ ಕ್ಯಾಂಪ್‌ಗೆ ಕರೆದೊಯ್ಯಲಾಗಿದ್ದು, ಸಿಎ ಸುಬೈರ್, ಕುಂಬಳೆ ಪಂಚಾಯತ್ ಅಧ್ಯಕ್ಷ ವಿಪಿ ಅಬ್ದುಲ್ ಖಾದರ್ ಹಾಜಿ, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಎ.ಕೆ. ಆರಿಫ್, ಕಾಂಗ್ರೆಸ್ ನಾಯಕ ಲಕ್ಷ್ಮಣ ಪ್ರಭು ಕುಂಬಳೆ ಮತ್ತು ಇತರರನ್ನು ಕುಂಬಳೆ ಪೊಲೀಸ್ ಠಾಣೆಗೆ ಕೊಂಡ್ಯೊಯ್ಯಲಾಗಿದೆ. ಬಂಧನದ ನಂತರ, ಪೊಲೀಸರು ಟೋಲ್ ಪ್ಲಾಜಾ ಬಳಿ ನಿರ್ಮಿಸಲಾದ ಪ್ರತಿಭಟನಾ ಚಪ್ಪರವನ್ನು ಕೆಡವಿ ಪ್ರತಿಭಟನೆ ಮುಕ್ತಾಯಗೊಳಿಸುವಂತೆ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎಕೆಎಂ ಆಶ್ರಫ್ ಪ್ರತಿಭಟನೆ ಇಲ್ಲಿಗೆ ನಿಲ್ಲುವುದಿಲ್ಲ ಮತ್ತು ಮುಂದಿನ ಹಂತದ ಹೋರಾಟದ ಕುರಿತು ಚರ್ಚಿಸಲು ಕ್ರಿಯಾ ಸಮಿತಿ ಸಭೆ ಸೇರಲಿದೆ ಎಂದರು. ಡಿವೈ.ಎಸ್. ಪಿ ಸುನೀಲ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನಾಕಾರರನ್ನು ಬಂಧಿಸಲಾಯಿತು.

0 Comments