Ticker

6/recent/ticker-posts

Ad Code

ಕುಂಜತ್ತೂರು ಆಸ್ತಿ ವಿವಾದ ಸಂಘರ್ಷ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿಯು ಮೃತ್ಯು

ಮಂಜೇಶ್ವರ:  ಕುಂಜತ್ತೂರು ಸಮೀಪದ ತೂಮಿನಾಡಿನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೆ ಏರಿದೆ. ನಿನ್ನೆ ಸಂಜೆ ಮನೆಯೊಳಗೆ ಆಸ್ತಿ ಹಾಗೂ ಕೌಟುಂಬಿಕ ವಿಚಾರವಾಗಿ ನಡೆದ ಘರ್ಷಣೆ  ಕೊಲೆಯಲ್ಲಿ ಅಂತ್ಯಗೊಂಡಿರುವುದು ನಾಡನ್ನು ಬೆರಗಾಗಿಸಿದೆ.  ತೀವ್ರ ಗಾಯಗೊಂಡಿದ್ದ ಶೇಕುಂಞಿ (60) ಇಂದು ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಆಸ್ತಿ ವಿವಾದದ ಕುರಿತಾದ ರಾಜಿ ಮಾತುಕತೆ ಜಗಳ ತಾರಕಕ್ಕೇರಿದ್ದು ಈ ವೇಳೆ 18 ಹರೆಯದ  ಜುಮೈಲಾ  ಆಕೆಯ  ತಂದೆ ಉಮ್ಮರ್ ಫಾರೂಕ್ ಇರಿತಕ್ಕೊಳಗಾಗಿ ಮೃತಪಟ್ಟಿದ್ದಳು.

                                                                                            ಆರೋಪಿ

ಇದೇ ವೇಳೆ  ಈಕೆಯ ಚಿಕ್ಕಪ್ಪ ಶೇಕುಂಞಿಗೂ ಫಾರೂಕ್ ಬಲಗಾಲಿಗೆ ಚಾಕುವಿನಿಂದ ಇರಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಶೇಕುಂಜಿ ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅವರ ಸ್ಥಿತಿ ಗಂಭೀರವಾಗಿತ್ತು. ಶೇಕುಂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟರು. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

Post a Comment

0 Comments