ಕುಂಬಳೆ : ಮುಟ್ಟಂ ರೈಲ್ವೆ ಗೇಟ್ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದು, ಪೋಲಿಸರನ್ನು ಕಂಡ ಕ್ಷಣ ತಪ್ಪಿಸಲೆತ್ನಿಸಿದ ಯುವಕನೋರ್ವನನ್ನು ಕುಂಬಳೆ ಠಾಣಾ ಪೊಲೀಸರು ಬೆನ್ನಟ್ಟಿ ಸೆರೆ ಹಿಡಿದಿದ್ದಾರೆ. ಆರೋಪಿ ದ.ಕ.ಜಿಲ್ಲೆಯ ಬಂಟ್ವಾಳದ ಎ.ಜೆ. ಮುಹಮ್ಮದ್ ಬಶೀರ್(38) ಎಂದು ಗುರುತಿಸಲಾಗಿದೆ. ಈತ ಕೇರಳ ಕರ್ನಾಟಕದ ಹಲವಾರು ದರೋಡೆ ಪ್ರಕರಣಗಳ ಆರೋಪಿಯಾಗಿದ್ದಾನೆ. ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ಕೆ. ಮುಕುಂದನ್ ಕಾರ್ಯಾಚರಣೆಯ ನೇತೃತ್ವವಹಿಸಿದ್ದರು. ಕರ್ನಾಟಕದಲ್ಲಿ ಮೂರು ಕಳ್ಳತನ ಪ್ರಕರಣಗಳು ಮತ್ತು ಕಣ್ಣೂರಿನಲ್ಲಿ ದರೋಡೆ ಯತ್ನ ಪ್ರಕರಣ ಆತನ ವಿರುದ್ಧ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆಯಿಂದ ಇನ್ನಷ್ಟು ದರೋಡೆ ಪ್ರಕರಣಗಳು ಬಯಲಾಗುವ ನಿರೀಕ್ಷೆಯಿದೆ.

0 Comments