ಕುಂಬಳೆ : ಅನಂತಪುರ ಕೈಗಾರಿಕಾ ವಲಯದ ಪ್ಲೈವುಡ್ ಕಾರ್ಖಾನೆಯೊಂದು ಇಂದು ಮುಂಜಾನೆ ಅಗ್ನಿಗೆ ಆಹುತಿಯಾಗಿದೆ. ಕೈಗಾರಿಕಾ ಪ್ರಾಂಗಣದಲ್ಲಿರುವ ಮಾರ್ಕ್ ವುಡ್ ಪ್ಲೈವುಡ್ ಫ್ಯಾಕ್ಟರಿ ಇಂದು ಮುಂಜಾನೆ ನಾಲ್ಕರ ವೇಳೆಗೆ ಅಗ್ನಿಗೆ ಆಹುತಿಯಾಯಿತು. ಪೇರಾಲ್ ಕಣ್ಣೂರಿನ ಅಬ್ದುಲ್ ರಹಿಮಾನ್ ಎಂಬವರಿಗೆ ಸೇರಿದ ಕಾರ್ಖಾನೆ ಇದಾಗಿದ್ದು, ನಿನ್ನೆ ರಾತ್ರಿ 12ರ ತನಕ ಇಲ್ಲಿ ಕಾರ್ಮಿಕರು ಕೆಲಸ ಮಾಡಿ ಮರಳಿದ್ದರು. ಕಾಸರಗೋಡು, ಉಪ್ಪಳ, ಕಾಞಂಗಾಡು ಮೊದಲಾದೆಡೆಯ ಎಂಟು ಅಗ್ನಿಶಾಮಕ ವಾಹನಗಳು ಬಂದು ಅಗ್ನಿ ಶಮನ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿತ್ತು. ಭಾರೀ ನಾಶ ನಷ್ಟ ಸಂಭವಿಸಿದೆ.

0 Comments