Ticker

6/recent/ticker-posts

Ad Code

ಕುಂಬ್ಡಾಜೆ ಪಂಚಾಯತಿನ ಮಹತ್ತರ ರೂಪುರೇಷೆಯೊಂದಿಗೆ ಯೋಜನಾ‌ ಸಮಿತಿಯ ಪ್ರಥಮ‌ ಸಭೆ ಯಶಸ್ವಿ

 

ಬದಿಯಡ್ಕ : ಮಹತ್ತರವಾದ ರೂಪುರೇಷೆಯೊಂದಿಗೆ ಕುಂಬ್ಡಾಜೆ ಗ್ರಾಮ ಪಂಚಾಯತಿನ ಯೋಜನಾ ಸಮಿತಿಯ ಪ್ರಥಮ ಸಭೆ  ಕುಂಬ್ಡಾಜೆ ಗ್ರಾಮ ಪಂಚಾಯತ್ ಹಾಲ್ ನಲ್ಲಿ ಜರಗಿತು. ಕುಂಬ್ಡಾಜೆ ಗ್ರಾಮ ಪಂಚಾಯತಿನ‌ ಅಧ್ಯಕ್ಷೆ ಯಶೋದಾ ಎನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ‌ಗ್ರಾಮ ಪಂಚಾಯತು ಉಪಾಧ್ಯಕ್ಷ ರವೀಂದ್ತ ರೈ ಗೋಸಾಡ, ಸ್ಥಾಯಿ ಅಧ್ಯಕ್ಷರಾದ ನಯನ ಪಿ, ಅಬೂಬಕ್ಕರ್ ಎಂ, ಪ್ರಿಯಾಂಕ ಎ ಸಿ, ಗ್ರಾಮ ಪಂಚಾಯತ್ ಸದಸ್ಯರಾದ  ಸೌಭಾಗ್ಯಲಕ್ಷ್ಮಿ, ಎಸ್ ಮೊಹಮ್ಮದ್, ಬಿ ಟಿ ಅಬ್ದುಲ್ಲ ಕುಂಞಿ, ನೂರುದ್ದೀನ್  ಯೋಜನಾ‌ ಸಮಿತಿ ಉಪಾಧ್ಯಕ್ಷ ರಾಜೇಶ್ ಶೆಟ್ಟಿ ಬಲೆಕ್ಕಳ, ಹಾಗೂ ಯೋಜನಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

ಯೋಜನಾ ಸಮಿತಿಯಲ್ಲಿ ಒಟ್ಟು12 ಮಂದಿಯಿದ್ದು, ಗ್ರಾಮ ಪಂಚಾಯತು ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಗಳ ಅದ್ಯಕ್ಷರಲ್ಲದೆ ಏಳು ಮಂದಿಯನ್ನು ಇತ್ತೀಚೆಗೆ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ನೇಮಕ ಗೊಳಿಸಲಾಯಿತು. ಉಪಾಧ್ಯಕ್ಷರಾಗಿ ಬಿ. ರಾಜೇಶ್ ಶೆಟ್ಟಿ ಬಲೆಕ್ಕಳ, ಸದಸ್ಯರಾಗಿ ಎಂ ಪ್ರಭಾಕರ ರೈ, ನಳಿನಿ ಕೃಷ್ಣ ಎಂ, ಸುವರ್ಣ ಮಾಸ್ಟರ್, ಸುಧೀರ್ ಕುಮಾರ್  ರೈ, ಜೋನಿ ಕ್ರಾಸ್ತ, ಅಲಿ ತುಪ್ಪೆಕ್ಕಲ್ಲು ಆಯ್ಕೆಗೊಂಡವರು. ಸಭೆಯಲ್ಲಿ ಅಸಿಸ್ಟೆಂಟ್ ಸೆಕ್ರೆಟರಿ ರಾಜೇಶ್ ಸ್ವಾಗತಿಸಿ, ರಾಜೇಶ್ ಶೆಟ್ಟಿ ವಂದಿಸಿದರು.

Post a Comment

0 Comments