Ticker

6/recent/ticker-posts

Ad Code

ಮಜೀರ್ಪಳ್ಳ "ಶ್ರೀ ದೇವಿ ಲೈಟಿಂಗ್ಸ್" ಮಾಲಕ, ಪ್ರಭಾಕರ.ಎಸ್ ಅಸೌಖ್ಯದಿಂದ ನಿಧನ.

 

ವರ್ಕಾಡಿ : ಮಜೀರ್ಪಳ್ಳ ಜಂಕ್ಷನ್ ನ "ಶ್ರೀ ದೇವಿ ಲೈಟಿಂಗ್ಸ್" ಮಾಲಕರಾಗಿದ್ದ, ಜೀನಸು ಅಂಗಡಿ ವ್ಯಾಪಾರಿ ಪ್ರಭಾಕರ.ಎಸ್ (63) ನಿನ್ನೆ ರಾತ್ರಿ ನಿಧನರಾದರು. ಅಸೌಖ್ಯ ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿಧನರಾದರು. ಮೃತರು ಉತ್ತಮ ನಾಟಕ ಕಲಾವಿದರಾಗಿದ್ದು, ಮಜೀರ್ಪಳ್ಳದಲ್ಲಿ "ಶ್ರೀ ದೇವೀ ಲೈಟಿಂಗ್ಸ್" ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ, ಬೆಳೆಸಿ ಹಲವು ಮಂದಿಗೆ ಕೆಲಸ ನೀಡಿ ಸಂಘ ಸಂಸ್ಥೆಗಳಲ್ಲಿ ದುಡಿದು ಜನಾನುರಾಗಿಯಾಗಿದ್ದರು. ವರ್ಕಾಡಿ ಸುಂಕದಕಟ್ಟೆ ಮಜೀರ್ ಪಳ್ಳದಲ್ಲಿ ಪ್ರಖ್ಯಾತ ಬಟ್ಟೆ ವ್ಯಾಪಾರಿಯಾಗಿದ್ದ ದಿವಂಗತ ಕೆ.ಕೆ.ಜಾಯಿರನ್ ರವರ ಹಿರಿಯ ಪುತ್ರರಾಗಿದ್ದಾರೆ. ಮೃತರು ಧರ್ಮಪತ್ನಿ ಶಕೀಲ, ಮಕ್ಕಳಾದ ಅಕ್ಷತಾ ಅಭಿಲಾಷ್ ಉಪ್ಪಳ, ಅನುಶಾ ಮಂಜೀತ್ ಉಳ್ಳಾಲ (ಪ್ರಸ್ತುತ ಅಮೇರಿಕ) ಸಹೋದರ ದಿವಾಕರ್ ಎಸ್.ಜೆ, ಸಹೋದರಿಯಾದ ಚಂದ್ರಕಲಾ, ಶಶಿಕಲಾ, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಗಣೇಶ ಭಕ್ತ ವೃಂದ, ಧರ್ಮ ನಗರ ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್, ಕೋಳಿಯೂರು ಫ್ರೆಂಡ್ಸ್ ಹೀಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಕಾರ್ಯೋನ್ಮುಖರಾಗಿದ್ದರು. ಕನಿಲ ಶ್ರೀ ಭಗವತಿ ಕ್ಷೇತ್ರದ ಆಡಳಿತ ಸಮಿತಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ಅಕಾಲ ಮರಣಕ್ಕೆ ಕುಟುಂಬಸ್ಥರೂ, ಊರವರೂ ಭಗವತಿ ಸೇವಾ ಸಂಘ ವರ್ಕಾಡಿ, ಗಣೇಶ್ ಭಕ್ತ ವೃಂದ, ವ್ಯಾಪಾರಿ ವ್ಯವಸಾಯಿ ಸಮನ್ವಯ ಸಮಿತಿ ವರ್ಕಾಡಿ ಗಾಢ ಸಂತಾಪ ಸೂಚಿಸಿದ್ದಾರೆ.

Post a Comment

0 Comments