ಅಡೂರು : ರಬ್ಬರ್ ಟ್ಯಾಪಿಂಗ್ ಕಾರ್ಮಿಕನಾದ ಯುವಕನೊಬ್ಬನ ಮೃತದೇಹ ಕಾಡಿನೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನನ್ನು ಶಂಕರಪಾಡಿಯ ಕೋರಂಪಾರೆಯ ಮಣಿಕಂಠ (47) ಎಂದು ಗುರುತಿಸಲಾಗಿದೆ. ರಬ್ಬರ್ ಟ್ಯಾಪಿಂಗ್ ಕೆಲಸಗಾರನಾದ ಈತ ತಿಂಗಳುಗಳಿಂದ ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ. ಈ ನಡುವೆ ನಿನ್ನೆ ಸಂಜೆ ಅಡೂರು ಪಾಂಡಿ ಅರಣ್ಯ ಪ್ರದೇಶದಲ್ಲಿ ಮಣಿಕಂಠನ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎ. ಬಾಲಕೃಷ್ಣನ್ ನಾಯರ್ ಮತ್ತು ಸಾವಿತ್ರಿ ದಂಪತಿಯ ಪುತ್ರನಾದ ಮಣಿಕಂಠ ಪತ್ನಿ ರಮ್ಯಾ, ಮಕ್ಕಳಾದ ದಯಾನಂದ ಮತ್ತು ಅಭಿನಂದನ್, ಸಹೋದರಿಯರಾಸ ಶಾಂತಿ ಮುನಿಯೂರು ಮತ್ತು ಜ್ಯೋತಿ ಪೆರಿಯಾ ಎಂಬಿವರನ್ನಗಲಿದ್ದಾರೆ.

0 Comments