ಕಣ್ಣೂರು : ಪರಶ್ಯಿನಕ್ಕಡವಿನ ಲಾಡ್ಜ್‌ವೊಂದರಲ್ಲಿ ಬಾಡಿಗೆ ರೂಮ್ ತೆಗೆದು ತಂಗಿದ್ದ ಮಹಿಳೆಯೋರ್ವಳ ಮೃತದೇಹ ಕೊಠಡಿಯೊಳಗೆ ಪತ್ತೆಯಾಗಿದ್ದು ಜತೆಗಿದ್ದ ಪುರುಷ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮೃತ ಮಹಿಳೆ ಕಣ್ಣಾಪುರದ ಅಯೋತ್ ನಿವಾಸಿಯಾದ ಕೆ.ವಿ. ಸೀಮಾ (50) ಎಂದು ಗುರುತಿಸಲಾಗಿದೆ.
ಎರಡು ವರ್ಷಗಳ ಹಿಂದೆ ತನ್ನ ಪತಿ ಸುರೇಶ್ ಅವರನ್ನು ಕಳೆದುಕೊಂಡಿದ್ದು, ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅಯೋತ್‌ನಲ್ಲಿರುವ ಕಡೇಲ್‌ಪರಂಬಿಲ್ ನ ಸೀಮಾ ಅವರ ನೆರೆಮನೆಯವರಾದ ಸ್ನೇಹಿತ ಕೆ.ಪಿ. ವಿಜಯನ್ ಜತೆ ನಿನ್ನೆ, ಮಧ್ಯಾಹ್ನ 12.50 ಕ್ಕೆ ಪರಸಿನಿಕ್ಕಡವಿನಲ್ಲಿರುವ ಸಮ್ಮರ್‌ಲ್ಯಾಂಡ್ ಇನ್ ಲಾಡ್ಜ್‌ನ ಕೊಠಡಿ ಸಂಖ್ಯೆ 602 ರಲ್ಲಿ ತಂಗಿದ್ದರು. ಸಂಜೆ, ವಿಜಯನ್ ಕೊಠಡಿಯನ್ನು ಹೊರಗಿನಿಂದ ಲಾಕ್ ಮಾಡಿ ಹೊರಗೆ ಹೋದರು. ಅವರು ಹಿಂತಿರುಗದ ಕಾರಣ ಲಾಡ್ಜ್ ಅಧಿಕಾರಿಗಳು ಕರೆ ಮಾಡಿ ಪೊಲೀಸರಿಗೆ ತಿಳಿಸಿದ್ದಾರೆ. ಇದರಂತೆ ಪೋಲಿಸರು ವಿಜಯನ್ ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅವರು ಈ ಲಾಡ್ಜ್‌ಗೆ ಈ ಹಿಂದೆಯೂ ಭೇಟಿ ನೀಡಿದ್ದರು ಎಂದು ಲಾಡ್ಜ್ ಅಧಿಕಾರಿಗಳು ತಿಳಿಸಿದ್ದು, ಇದು ಕೊಲೆ ಎಂಬುದಾಗಿ ಪ್ರಾಥಮಿಕ ಸೂಚನೆಗಳಲ್ಲಿ ಕಂಡು ಬಂದಿದ್ದು. ಮರಣೋತ್ತರ ಪರೀಕ್ಷೆಯ ನಂತರವೇ ಹೆಚ್ಚಿನ ವಿವರಗಳನ್ನು ಹೇಳಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿ ಶವವನ್ನು ಪರಿಯಾರಂನಲ್ಲಿರುವ ಕಣ್ಣೂರು ವೈದ್ಯಕೀಯ ಕಾಲೇಜು ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.

0 Comments