Ticker

6/recent/ticker-posts

Ad Code

ಆರಿಕ್ಕಾಡಿ ಟೋಲ್ ಗೇಟ್ ರದ್ದು : ಕಾರಣಕರ್ತರಿಗೆ ಅಭಿನಂದನೆ

 

ಮಂಜೇಶ್ವರ :  ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ ಕುಂಬಳೆ ಆರಿಕ್ಕಾಡಿ ಟೋಲ್ ಗೇಟ್ ರದ್ದು ಮಾಡಿದ ಶಾಸಕರಿಗೂ ಸಾರ್ವಜನಿಕರಿಗೂ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಗಣೇಶ್ ಪಾವೂರು ಅಭಿನಂದನೆ ತಿಳಿಸಿದ್ದಾರೆ. 

 ಜನರ ಪ್ರತಿಭಟನೆಗೆ ಕೇಂದ್ರ ಸರ್ಕಾರ ಮಣಿದು ಟೋಲ್ ಗೇಟ್ ರದ್ದು ಮಾಡಿದೆ. ಭಾರತೀಯ ಜನತಾ ಪಕ್ಷದ ನೇತಾರರು ಎಲ್ಲವನ್ನು ನಾವೇ ಮಾಡಿದ್ದು ಎಂದು ಜಯಘೋಷ ಮೆರವಣಿಗೆ ಮಾಡಿದ್ದು ನಾಚಿಕೆಗೇಡಿನ ವಿಷಯ. ಸುಮಾರು ಆರು ತಿಂಗಳು ಸಾರ್ವಜನಿಕರು ಪ್ರತಿಭಟನೆ ಮಾಡುವಾಗ ಇವರು ಏನು ಮಾಡುತ್ತಿದ್ದರು ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷದ ಅಧಿಕಾರ ಇದೆ. ಅವರು ಮಾಡುವುದಾದರೆ ಯಾವಾಗಲೇ ಮಾಡಬಹುದಾಗಿತ್ತು ಎಂದು ಅವರು ತಿಳಿಸಿದ್ದು, ಜನತೆಯ ನೋವು ಅರ್ಥ ಮಾಡಿಕೊಂಡು ಟೋಲ್ ಗೇಟ್ ರದ್ದು ಪಡಿಸಿದ ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಗರಿ ಅವರಿಗೆ ಕೂಡಾ ಗಣೇಶ್ ಪಾವೂರು ಅಭಿನಂದನೆ ಸಲ್ಲಿಸಿದ್ದಾರೆ.

Post a Comment

0 Comments