ಉಪ್ಪಳ : ಮಣ್ಣಂಗುಳಿಯ ಅಂಗನವಾಡಿಗೆ ಕಳ್ಳರು ನುಗ್ಗಿದ್ದು ಬೆಳಿಗ್ಗೆ ಅಂಗನವಾಡಿ ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳ ಬಾಗಿಲಿನ ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿ ಅಂಗನವಾಡಿಯಲ್ಲಿನ ಮೊಟ್ಟೆಗಳನ್ನು ತಿಂದಿದ್ದಾನೆ. ಮಿಕ್ಸರ್, ಮೂರು ಜಾಡಿಗಳು, ಎರಡು ಕುಕ್ಕರ್‌ಗಳು, ತಟ್ಟೆಗಳು ಮತ್ತು ಸೌಂಡ್ ಬಾಕ್ಸ್ ಗಳನ್ನು ಕೊಂಡೊಯ್ದಿದ್ದಾನೆ ಎಂದು ಶಿಕ್ಷಕಿ ಭಾಗೀರಥಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದು, ತನಿಖೆಯ ಭಾಗವಾಗಿ, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ತಪಾಸಣೆಗೈದರು.

0 Comments