Ticker

6/recent/ticker-posts

Ad Code

ರಸ್ತೆಗೆ ಬಿದ್ದ ಹಿಂಬದಿ ಸವಾರೆ ಮೇಲೆ ಚಲಿಸಿದ ಬಸ್‌ : ಯುವತಿ ದಾರುಣ ಸಾವು

 

ಮಂಗಳೂರು : ನಗರದ ನಂತೂರು ವೃತ್ತದ ಬಳಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿಯಾಗಿದ್ದು ಹಿಂಬದಿ ಸವಾರೆಯಾಗಿದ್ದ ಯುವತಿಯ ಮೇಲೆ ಬಸ್ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ. ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಮೃತಪಟ್ಟ ಯುವತಿ. ಈಕೆ ತನ್ನ ಭಾವೀ ಪತಿಯೊಂದಿಗೆ ಶಿವಭಾಗ್ ಕಡೆಯಿಂದ ಸ್ಕೂಟರ್ ನಲ್ಲಿ ವಾಮಂಜೂರು ಕಡೆಗೆ ತೆರಳುತ್ತಿದ್ದರು. ಈ ವೇಳೆ, ಕದ್ರಿ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಸಾಗುತ್ತಿದ್ದ ಬಸ್ ತಾಗಿದ್ದು ಹಿಂಬದಿಯಿದ್ದ ಸವಾರೆ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ, ಬಸ್ ಆಕೆಯ ಹೊಟ್ಟೆಯ ಮೇಲೆ ಹರಿದಿದ್ದು ಗಂಭೀರ ಗಾಯಗೊಂಡಿದ್ದಾರೆ. ಕೂಡಲೇ ಎಜೆ ಆಸ್ಪತ್ರೆಗೆ ಒಯ್ದಿದ್ದು ಅಷ್ಟರಲ್ಲಿ ಆಕೆ ಅಸುನೀಗಿದ್ದಾರೆ.

Post a Comment

0 Comments