ಪೆರ್ಲ: ಎಣ್ಮಕಜೆ ಗ್ರಾ. ಪಂ. ಕೃಷಿ ಆಫೀಸಿನ ಅಸಿಸ್ಟೆಂಟ್ ಕೃಷಿ ಆಫೀಸರ್ ಮುಳ್ಳೇರಿಯ ಬಳಿಯ ಕಾರಡ್ಕ ನಿವಾಸಿ ಕೆ. ಸಿ. ಜಯಶ್ರೀ(50) ನಿಧನರಾದರು. ಅವರು ಎಣ್ಮಕಜೆಯಲ್ಲಿ ಕರ್ತವ್ಯ ನಿರ್ವಹಿಸುವ ನಡುವೆ ಅಸೌಖ್ಯಕ್ಕೊಳಗಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು.ಕಾರಡ್ಕದ ರಾಮನ್ -ಜಾನಕಿ ದಂಪತಿಯರ ಪುತ್ರಿಯಾಗಿದ್ದಾರೆ. ಇವರು
ಕಲೆ ,ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಎಣ್ಮಕಜೆ ಪಂಚಾಯತಿನ ಕೃಷಿ ದಿನಾಚರಣೆ, ಓಣಂ,ಕೇರಳೋತ್ಸವ ಮೊದಲಾದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಚತುರರಾಗಿದ್ದರು.
ಮೃತರು ಪತಿ ಸೀತಾಂಗೋಳಿ ಕೆ. ಎಸ್. ಇ. ಬಿ. ಯ ಅಸಿಸ್ಟೆಂಟ್ ಇಂಜಿನಿಯರ್ ವಿ. ರಾಜೀವನ್, ಮಕ್ಕಳಾದ ಋತುಪರ್ಣ ರಾಜ್, ಋತ್ವಿಕ್ ರಾಜ್ ಹಾಗೂ ಸಹೋದರರಾದ ಕೆ. ಸಿ. ರಘುವರನ್, ಕೆ. ಸಿ. ವಿಜಯಕುಮಾರಿ (ನಿವೃತ್ತ ಅಸಿಸ್ಟೆಂಟ್ ಅಗ್ರಿಕಲ್ಚರ್ ಆಫೀಸರ್), ಕೆ. ಸಿ. ರಾಜೇಶ್ ಕುಮಾರ್ (ವಿಜ್ಞಾನಿ, ಪೂನಾ) ಅಪಾರ ಬಂಧು, ಬಳಗವನ್ನು ಅಗಲಿದ್ದಾರೆ.

0 Comments