ಮುಳ್ಳೇರಿಯ : ಬೆಳ್ಳೂರಿನ ಮನೆಯೊಂದರ ಸ್ಚಾನ ಗೃಹದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಗೃಹಿಣಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ನೆಟ್ಟಣಿಗೆ ಸಮೀಪದ ವೀರಮೂಲೆಯ ಕೃಷ್ಣಪ್ಪ ಮೂಲ್ಯ ಎಂಬವರ ಪತ್ನಿ ಲೀಲಾವತಿ (52) ಮೃತ ಮಹಿಳೆ. ಶುಕ್ರವಾರ ಸಂಜೆ ಲೀಲಾವತಿ ಅವರು ತಮ್ಮ ಮನೆಯ ಬಾತ್ ರೂಂನಲ್ಲಿ ಬಿದ್ದಿರುವುದು ಕಂಡು ಬಂದಿದ್ದು, ಕೂಡಲೇ ಈಶ್ವರಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದ್ದು, ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸಾವು ಸಂಭವಿಸಿದೆ.ಮೃತರು ಮಕ್ಕಳಾದ ಚೇತನ್, ಹರಿಶ್ಚಂದ್ರ ಮತ್ತು ಮನೋಜ್. ಸೊಸೆ ಜ್ಯೋತಿ ಎಂಬಿವರನ್ನಗಲಿದ್ದಾರೆ .

0 Comments