Ticker

6/recent/ticker-posts

Ad Code

ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 172.8 ಲೀಟರ್ ವಿದೇಶ ಮದ್ಯ ಸಹಿತ ಯುವಕನ ಸೆರೆ

 

ಬದಿಯಡ್ಕ : ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 172.8 ಲೀಟರ್ ಕರ್ಣಾಟಕ ನಿರ್ಮಿತ ವಿದೇಶ ಮದ್ಯವನ್ನು ಅಬಕಾರಿ  ಸ್ಪೆಶಲ್ ಸ್ಕ್ವಾಡ್  ವಶಪಡಿಸಿದೆ. ಸಾಗಾಟದ ಆರೋಪಿ ನಾಯ್ಕಾಪು ನಿವಾಸಿ ಧನಂಜಯ ಪೂಜಾರಿ (35) ಎಂಬಾತನನ್ನು ಬಂಧಿಸಲಾಗಿದೆ. 

ಆದೂರು‌ ಮೊಯಂದಪಾರ ಎಂಬಲ್ಲಿ ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ಕಾರ್ಯಾಚರಣೆ ನಡೆದಿದೆ. ಈ‌ ಪ್ರಕರಣವನ್ನು ಬದಿಯಡ್ಕ ಅಬಕಾರಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಪ್ರಿವೆಂಟಿವ್ ಆಫೀಸರ್ ಕೆ.ವಿ.ರಂಜಿತ್ ರವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇತರ ಅಧಿಕಾರಿಗಳಾದ ಸೋನು ಸೆಬಾಸ್ಟಿಯನ್, ಶೈಲೇಶ್ ಕುಮಾರ್, ಸುಧೀರ್ ಪಾರಮ್ಮಲ್, ಮಂಜುನಾಥ, ಕಬೀರ್, ಸಾಜನ್, ಕ್ರಿಸ್ಟಿನ್.ಪಿ.ಎ ಮೊದಲಾದವರು ಪಾಲ್ಗೊಂಡಿದ್ದರು.

Post a Comment

0 Comments