Ticker

6/recent/ticker-posts

Ad Code

ಕಾಸರಗೋಡು ಶ್ರೀ ವಿಶ್ವಕರ್ಮ ಭಜನಾ ಸಂಘದ 69ನೇ ಭಜನಾ ವಾರ್ಷಿಕೋತ್ಸವ ಸಂಪನ್ನ

ಕಾಸರಗೋಡು : ಶ್ರೀ ವಿಶ್ವಕರ್ಮ ಭಜನಾ ಸಂಘದ 69ನೇ  ಭಜನಾ ವಾರ್ಷಿಕೋತ್ಸವ ಕಾರ್ಯಕ್ರಮ  ಕರಂದಕ್ಕಾಡು ಶ್ರೀ ವಿಶ್ವಕರ್ಮ ಮಂದಿರದಲ್ಲಿ ಜರಗಿತು. ಸಂಘದ ಧ್ವಜಾರೋಹಣ ಮತ್ತು  ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡ ವಾರ್ಷಿಕ ಉತ್ಸವದಲ್ಲಿ ಸಂಜೆ  ಮಾಯಿಪ್ಪಾಡಿ ಪುರೋಹಿತ  ಕೇಶವ ಆಚಾರ್ಯರಿಂದ ದೀಪ ಪ್ರತಿಷ್ಥೆಯೊಂದಿಗೆ ಭಜನೆ ಆರಂಭಗೊಂಡು  ಪುರೋಹಿತ  ಧರ್ಮೇಂದ್ರ ಆಚಾರ್ಯ ದುರ್ಗಿಪಳ್ಳರಿಂದ ಮಹಾಪೂಜೆ ಹಾಗೂ ಮರುದಿನ ಬೆಳಿಗ್ಗೆ 6.55 ಕ್ಕೆ ಭಜನಾ ಸಮಾಪ್ತಿಯೊಂದಿಗೆ ದೀಪ ವಿಸರ್ಜಿಸಲಾಯಿತು. 

ರಾತ್ರಿ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪರಿಸರದಿಂದ ಹೊರಟ ಉಲ್ಪೆ ಮೆರವಣಿಗೆ ಹಾಗೂ ಮಂದಿರದ ಕಾರ್ಯಕ್ರಮದಲ್ಲಿ ಊರ, ಪರಊರ ಮಹನೀಯರು ಹಾಗೂ ಸಮಾಜ ಬಾಂಧವರು ಭಾಗವಹಿಸಿ ವಿಜೃಂಭಣೆಯೊಂದಿಗೆ ಭಜನಾ ವಾರ್ಷಿಕೋತ್ಸವ ಸಮಾಪ್ತಿಗೊಂಡಿತು.

Post a Comment

0 Comments