Ticker

6/recent/ticker-posts

Ad Code

ದಾರಿಯಲ್ಲಿ ಬಿದ್ದು ಸಿಕ್ಕಿದ ನಗದು ಹಿಂತಿರುಗಿಸಿದ ಹರಿತಕರ್ಮ ಕಾರ್ಯಕರ್ತೆಯ ಪ್ರಾಮಾಣಿಕತೆ

 

ಪೆರ್ಲ : ದಾರಿ ನಡುವೆ ಹರಿತಕರ್ಮ ಕಾರ್ಯಕರ್ತೆಯೋರ್ವರಿಗೆ ಬಿದ್ದು ಸಿಕ್ಕಿದ ನಗದು ಮೊತ್ತವನ್ನು ವಾರೀಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಬೆದ್ರಂಪಳ್ಳದಲ್ಲಿ ನಡೆದಿದೆ. ಇಲ್ಲಿನ ಎಣ್ಮಕಜೆ ಪಂಚಾಯತ್ ನ‌ 16ನೇ ವಾರ್ಡಿನ‌ ಹರಿತ ಕರ್ಮ ಕಾರ್ಯಕರ್ತೆ ಭಾರತೀ ರಾಜು ಅವರು ಈ ರೀತಿ ಬಿದ್ದು ಸಿಕ್ಕಿದ ಹಣವನ್ನು  ವಾರೀಸುದಾರರನ್ನು ಹುಡುಕಿ‌ ಅವರ ಮನೆಗೆ ತೆರಳಿ ಹಿಂತಿರುಗಿಸಿದ್ದಾರೆ. ಬಲ್ತಕಲ್ಲು ನಿವಾಸಿ ದಯಾನಂದ ರೈ ಅವರು ಬೆದ್ರಂಪಳ್ಳದಿಂದ ಮನೆಗೆ ತೆರಳುವ ನಡುವೆ ಹಣ ಕಳೆದು ಹೋಗಿದ್ದು ಇದರ ಜತೆಗೆ ಹಾಲಿನ ಡೈರಿಯ ಪಾಸ್ ಪುಸ್ತಕ ಇದ್ದ ಕಾರಣ ನಿಜವಾದ ವಾರೀಸುದಾರರನ್ನು ತಿಳಿಯಲು ಸುಲಭ ಸಾಧ್ಯವಾಗಿತ್ತು.

Post a Comment

0 Comments