Ticker

6/recent/ticker-posts

Ad Code

ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾರ್ಚ್ 29ರಿಂದ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ

 

ಪೆರ್ಲ : ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ  ಮಾರ್ಚ್  29 ಆದಿತ್ಯವಾರದಿಂದ ಏಪ್ರಿಲ್ 03 ಶುಕ್ರವಾರದವರೆಗೆ  ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರು ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ, ಶ್ರೀ ಎಡನೀರು ಮಠ ಇವರ ಪೂರ್ಣಾನುಗ್ರಹದೊಂದಿಗೆ ಶ್ರೀಕ್ಷೇತ್ರದ ಆಚಾರ್ಯ ಬ್ರಹ್ಮಶ್ರೀ ಗಣೇಶ ತಂತ್ರಿಗಳು ದೇಲಂಪಾಡಿ ಇವರ ನೇತೃತ್ವದಲ್ಲಿ ಪರಮಪೂಜ್ಯ ಪದ್ಮವಿಭೂಷಣ ಡಾ| ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿ ಶ್ರೀಕ್ಷೇತ್ರ ಧರ್ಮಸ್ಥಳ, ಇವರ  ಮಾರ್ಗದರ್ಶನದಲ್ಲಿ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.ಇದರ ಅಂಗವಾಗಿ ಫೆ. 13 ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬ್ರಹ್ಮಕಲಶೋತ್ಸವದ  "ಸಿದ್ದತಾ ಸಭೆ"  ನಡೆಯಲಿದೆ. ಜತೆಗೆ ಬ್ರಹ್ಮಕಲಶೋತ್ಸವ ಮಹಾ ಅಭಿಯಾನಕ್ಕೆ ಚಾಲನೆ, ವಿವಿಧ ಉಪಸಮಿತಿಗಳ ಕೆಲಸಕಾರ್ಯಗಳ ಬಗ್ಗೆ ವಿಚಾರ ವಿಮರ್ಶೆ ನಡೆಯಲಿದೆ. ವಿವಿಧ ಸಮಿತಿ ಸದಸ್ಯರು, ಕ್ಷೇತ್ರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಗ್ರಹಿಸಲಾಗಿದೆ.

Post a Comment

0 Comments